ಕರ್ನಾಟಕಪ್ರಮುಖ ಸುದ್ದಿ

ಶಾಲಿನಿ ಐಎಎಸ್ ಚಿತ್ರೀಕರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

ರಾಜ್ಯ,(ಬೆಂಗಳೂರು)ಜೂ.24:- ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಬರೆದಿರುವ ಐಎಎಸ್ ದಂಪತಿಯ ಕನಸುಗಳ ಪುಸ್ತಕ ಆಧಾರಿತ ಸಿನಿಮಾ ಶಾಲಿನಿ ಐಎಎಸ್ ಚಿತ್ರೀಕರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಚಾಲನೆ ನೀಡಿದರು.

ಬೆಂಗಳೂರಿನ ಗಾಂಧಿಭವನದಲ್ಲಿ ನಡೆದ ಸಮಾರಂಭದಲ್ಲಿ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರ ಸಾನಿಧ್ಯದಲ್ಲಿ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರ ಅತ್ಯುತ್ತಮವಾಗಿ ಮೂಡಿ ಬರಲಿ ಎಂದರು. ಈ ಸಂದರ್ಭ ಸಚಿವರಾದ ರಮೇಶ್ ಕುಮಾರ್, ರೋಷನ್ ಬೇಗ್,  ಬಸವರಾಜ್ ಹೊರಟ್ಟಿ, ಡಾ.ಶಾಲಿನಿ ರಜನೀಶ್ ಹಾಗೂ ಡಾ.ರಜನೀಶ್ ಗೋಯಲ್ ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: