ಮೈಸೂರು

ಪಂಜಿನ ಕವಾಯತು: ಬನ್ನಿಮಂಟಪಕ್ಕೆ ಹೆಚ್ಚಿನ ಭದ್ರತೆ

2016 ರ ದಸರಾದ ಟಾರ್ಚ್ ಲೈಟ್ ಪರೇಡ್ ಗೆ ಕ್ಷಣಗಣನೆ ಶುರುವಾಗಿದೆ. ಇದಕ್ಕಾಗಿ ಮೈಸೂರಿನ ಬನ್ನಿಮಂಟಪದಲ್ಲಿ ನಡೆಯಲಿರುವ ಬೆಳಕಿನ ಆಟ ಹಾಗೂ ಪಂಜಿನ ಕವಾಯತಿಗೆ ಭರ್ಜರಿ ತಯಾರಿ ನಡೆಯುತ್ತಿದೆ. ಇಂದು ಸಂಜೆ ಟಾರ್ಚ್ ಲೈಟ್ ಪರೇಡ್ ನ ರಿಹರ್ಸಲ್ ನಡೆಯಲಿದ್ದು, ನಾಳೆ ಗಣ್ಯರ ಸಮ್ಮುಖದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಈಗಾಗಲೇ ಆಸನ ವ್ಯವಸ್ಥೆ, ಸೌಂಡ್ ಸಿಸ್ಟಮ್, ಭದ್ರತೆ ಸೇರಿದಂತೆ ಇತರೆ ಕಾರ್ಯಗಳು ಪ್ರಗತಿಯಲ್ಲಿದೆ. ಇಷ್ಟೇ ಅಲ್ಲದೇ ಬರೋಬ್ಬರಿ ಸಾವಿರಕ್ಕೂ ಹೆಚ್ಚು ಪೊಲೀಸರನ್ನ ಬನ್ನಿಮಂಟಪದಲ್ಲೇ ನಿಯೋಜನೆ ಮಾಡಲಾಗಿದ್ದು, ಅಹಿತಕರ ಘಟನೆ ನಡೆಯದಂತೆ ಕ್ರಮಕೈಗೊಳ್ಳಲಾಗಿದೆ. ಅಧಿಕಾರಿಗಳ ಉಸ್ತುವಾರಿಯೊಂದಿಗೆ ಭದ್ರತಾ ಸಿದ್ಧತೆ ನಡೆಯುತ್ತಿದ್ದು, ಇದಕ್ಕಾಗಿ ರಾಜ್ಯದ ಮೂಲೆ-ಮೂಲೆಗಳಿಂದಲೂ ಪೊಲೀಸರು ಮೈಸೂರಿಗೆ ಬಂದಿದ್ದಾರೆ. ಜೊತೆಗೆ ಬಿಗಿಭದ್ರತೆಗೆ ಸಿದ್ದರಾಗಿದ್ದಾರೆ.

Leave a Reply

comments

Related Articles

error: