ಕರ್ನಾಟಕ

ಅಶ್ರಫ್ ಕೊಲೆ ಪ್ರಕರಣ: 5 ಆರೋಪಿಗಳ ಬಂಧನ

ಮಂಗಳೂರು,ಜೂ.24-ಎಸ್ ಡಿಪಿಐ ಮುಖಂಡ ಅಶ್ರಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಪುದು ಗ್ರಾಮದ ಕುಮ್ಡೇಲ್ ನ  ಪವನ್ ಕುಮಾರ್(೨೪), ರಂಜಿತ್(೨೮), ತುಂಬೆ ಗ್ರಾಮದ ಸಂತೋಷ್ (೨೩), ಶಿವಪ್ರಸಾದ್(೨೪), ತೆಂಕಬೆಳ್ಳೂರು ಅಭಿನ್ ರೈ(೨೩) ಬಂಧಿತ ಆರೋಪಿಗಳು.

ಭರತ್ ಕುಮ್ಡೇಲ್, ದಿವ್ಯರಾಜ್ ಶೆಟ್ಟಿ ಅವರ ಸಂಚು ಇದಾಗಿದ್ದು, ಇವರ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ. ತುಂಬೆಯಲ್ಲಿ ನಡೆದ ಹಲ್ಲೆ ಘಟನೆಯಲ್ಲೂ ಈ ತಂಡದ ಪಾತ್ರ ಇದ್ದು, ಗಲಭೆ ಸೃಷ್ಟಿಸುವ ಉದ್ದೇಶದಿಂದ ಈ ಹತ್ಯೆ ನಡೆಸಲಾಗಿದೆ ಎಂದು ಹೇಳಲಾಗಿದೆ. ಜೂ.21 ರಂದು ಕೊಲೆ ನಡೆದಿತ್ತು.

ಶಾಂತಿ ಸುವ್ಯವಸ್ಥೆಗಾಗಿ ಬಂಟ್ವಾಳದ ೨೦ ಜನರ ಮೇಲೆ ಗೂಂಡ ಕಾಯ್ದೆಗೆ ಸಿದ್ಧತೆ ನಡೆಸಲಾಗಿದ್ದು, ಇದಕ್ಕಾಗಿ ವಿಶೇಷ ತನಿಖಾ ತಂಡವೊಂದನ್ನು ರಚಿಸಲಾಗುವುದು ಎಂದು ಮಂಗಳೂರು ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಹೇಳಿದ್ದಾರೆ. (ವರದಿ-ಎಸ್.ಎನ್, ಎಂ.ಎನ್)

Leave a Reply

comments

Related Articles

error: