ಮೈಸೂರು

ದಸರಾ ಸಂಭ್ರಮ: ವಿಜಯದಶಮಿಗೆ ಮುನ್ನಾದಿನ ಆಯುಧ ಪೂಜೆ ನೆರವೇರಿಸಿದ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್

ದಸರಾ ಮಹೋತ್ಸವದ ಅಂಗವಾಗಿ ಮೈಸೂರು ಅರಮನೆಯಲ್ಲಿ ಆಯುಧಪೂಜಾ ದಿನವಾದ ಸೋಮವಾರ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಧನುರ್ ಲಗ್ನದಲ್ಲಿ ಸಂಪ್ರದಾಯದಂತೆ  ಪೂಜಾ ವಿಧಿವಿಧಾನಗಳನ್ನು ನೆರವೇರಿಸಿರು.

ಬೆಳ್ಳಗ್ಗೆ 5.30ಕ್ಕೇ ಅರಮನೆ ಆವರಣದಲ್ಲಿ ಆಯುಧಪೂಜಾ ವಿಧಿವಿಧಾನಗಳು ಪ್ರಾರಂಭಗೊಂಡು ಮೊದಲಿಗೆ ಸಾಲಿಗ್ರಾಮ ಪೂಜೆ ನೇರವೇರಿತು. ಪುರಾತನ ದೇವಾಲಯ ಕೋಡಿ ಸೋಮೇಶ್ವರ ದೇವಾಲಯಕ್ಕೆ ಮೈಸೂರು ಮಹಾಸಂಸ್ಥಾನದ ರಾಜರ ಚಿನ್ನದ ಖಡ್ಗ, ಪಿಸ್ತೂಲು ಸೇರಿದಂತೆ ಅರಮನೆಯ ಆಯುಧಗಳನ್ನು ಚಿನ್ನಲೇಪಿತ ಪಲ್ಲಕ್ಕಿಯಲ್ಲಿ ಕೊಂಡೊಯ್ದು ಪುರಾತನ ಬಾವಿಯ ಗಂಗೆಯಿಂದ ಶುಚಿಗೊಳಿಸಲಾಯಿತು.

ಶುಚಿಗೊಳಿಸಿದ ಅರಮನೆ ಆಯುಧಗಳನ್ನು  ಪಲ್ಲಕ್ಕಿಯಲ್ಲಿ ಆನೆ ಬಾಗಿಲ ಮೂಲಕ ಕಲ್ಯಾಟಮಂಟಪಕ್ಕೆ ತಂದು ಜೋಡಿಸಿ ರಾಜಪುರೋಹಿತರು ಮಾರ್ಗದರ್ಶನದಂತೆ ಎಲ್ಲಾ ಆಯುಧಗಳಿಗೂ ವಿಶೇಷ ಪೂಜೆ ಸಲ್ಲಿಸಿದರು.

ಬೆಳಗ್ಗೆ 6.15 ರ ತುಲಾ ಲಗ್ನದಲ್ಲಿ ಚಂಡಿಕಾ ಹೋಮ, 8.15ಕ್ಕೆ ಪುರ್ಣಾಹುತಿ, 11-11.20 ರ ವೇಳೆ ಕರಿಕಲ್ಲು ತೊಟ್ಟಿಯಲ್ಲಿ ಆಯುಧ ಪೂಜೆ, ನಂತರ ಅರಮನೆಯ ಪಟ್ಟದ ಆನೆ, ಪಟ್ಟದ ಕುದುರೆಗಳು, ಪಟ್ಟದ ಒಂಟೆಗಳು, ಪಟ್ಟದ ಹಸುಗಳು ಹಾಗೂ ಅರಮನೆ ಆರು ಆನೆಗಳಿಗೂ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರು ಸಕಲ ರೀತಿಯ ಸಂಪ್ರದಾಯಕ ಪೂಜೆ ನೇರವೇರಿಸಿದರು. ನಂತರ ಐಷಾರಾಮಿ ಕಾರುಗಳಿಗೆ ಪೂಜೆ ಸಲ್ಲಿಸಿದರು. ರಾಜಮಾತೆ ಪ್ರಮೋದಾದೇವಿ ಒಡೆಯರ್, ಪತ್ನಿ ತ್ರಿಷಿಕಾಕುಮಾರಿ ಸಿಂಗ್ ಅವರು ಗ್ಯಾಲರಿಯಲ್ಲಿ ನಿಂತು ಪೂಜಾ ವಿಧಿ ವಿಧಾನಗಳನ್ನು ಶ್ರದ್ಧೆ ಸಂಭ್ರಮದಿಂದ ವೀಕ್ಷಿಸಿದರು.

 

palace6

palace10

Leave a Reply

comments

Related Articles

error: