ಪ್ರಮುಖ ಸುದ್ದಿಮೈಸೂರು

ವೀಕೆಂಡ್ ವಿತ್ ರಮೇಶ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬಿಗ್ ಸ್ಕ್ರೀನ್ ನಲ್ಲಿ ವೀಕ್ಷಿಸಿದ ಹುಟ್ಟೂರು ಜನತೆ

ಪ್ರಮುಖಸುದ್ದಿ,ಮೈಸೂರು,ಜೂ.24:- ಝೀ ವಾಹಿನಿಯ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್  ಸಾಧಕರ ಸೀಟ್ ನಲ್ಲಿ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಳಿತಿರುವುದನ್ನು  ಮುಖ್ಯಮಂತ್ರಿಗಳ ತವರಿನ ಜನ ಮೈಸೂರಿನ ಟಿ.ಕೆ.ಲೇ ಔಟ್ ನ ಮಾರುತಿ ಟೆಂಟ್ ಸರ್ಕಲ್ ನಲ್ಲಿ ಬಿಗ್ ಸ್ಕ್ರೀನ್ ಅಳವಡಿಸಿ ವೀಕ್ಷಿಸಿದರು.

ಮಖ್ಯಮಂತ್ರಿ ಸಿದ್ದರಾಮಯ್ಯನವರ ಬಾಲ್ಯ, ಯೌವ್ವನ, ಅವರ ಕಾಲೇಜು ದಿನಗಳು, ಸಹಪಾಠಿಗಳು, ಸ್ನೇಹಿತರು, ರಾಜಕೀಯ ಜೀವನಗಳ ಕುರಿತು ತಿಳಿಯುವ ಕುತೂಹಲ ಬಹುತೇಕ ಎಲ್ಲರಲ್ಲಿಯೂ ಇರುವುದು ಸಹಜ. ಅವುಗಳನ್ನು ವೀಕ್ಷಿಸುವ ತವಕ ಅವರ ಹುಟ್ಟೂರಿನ ಜನತೆಯಲ್ಲೂ ಬಹಳವಾಗಿದ್ದು, ರಾತ್ರಿ 9ಗಂಟೆಯಿಂದ 10.30ವರೆಗೆ ಝೀ ಕನ್ನಡ ವಾಹಿನಿಯಲ್ಲಿ  ಕಾರ್ಯಕ್ರಮ ಪ್ರಸಾರವಾಗಿದ್ದು, ಅದನ್ನು ಕುತೂಹಲದಿಂದ ಎಳೆಯರಿಂದ ವೃದ್ಧರವರೆಗೂ ವೀಕ್ಷಿಸಿದರು. ಸ್ಥಳೀಯ ಅಭಿಮಾನಿಗಳಾದ ಗೋಪಿ ಮತ್ತು ಬಳಗ  ಬಿಗ್ ಸ್ಕ್ರೀನ್ ಅಳವಡಿಸಿತ್ತು. ಕಾರ್ಯಕ್ರಮದ ಅರ್ಧಭಾಗ ಪ್ರಸಾರವಾಗಿದ್ದು, ಉಳಿದರ್ಧ ನಾಳೆ (ಭಾನುವಾರ)ರಾತ್ರಿ 9ಗಂಟೆಗೆ ಪ್ರಸಾರವಾಗಲಿದೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: