ಮೈಸೂರು

ಪರಿಸರ ಸಂರಕ್ಷಣೆಯ ಅಗತ್ಯವಿದೆ : ಎಸ್.ಅರುಣ್ ಕುಮಾರ್

ಮೈಸೂರು,ಜೂ.25:- ನಗರದ ಚಾಮರಾಜಪುರಂನಲ್ಲಿರುವ ರವಿವರ್ಮ ಚಿತ್ರಕಲಾ ಶಾಲೆಯಲ್ಲಿ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ 2ನೇ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ ಹಾಗೂ ವೀರಣ್ಣ ಕರಡಿ ಇವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಭಾನುವಾರ ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ಹೋರಾಟಗಾರ ಹಾಗೂ ವಕೀಲ ಎಸ್.ಅರುಣ್ ಕುಮಾರ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಪರಿಸರ ಕುರಿತು ಚಿತ್ರ ರಚಿಸುವುದು ಹಾಗೂ ಚಿತ್ರಪ್ರದರ್ಶನ ಮಾಡುವುದರಿಂದ ಪರಿಸರ ಕುರಿತು ಕಾಳಜಿ, ಜಾಗೃತಿ ಬೆಳೆಯಲಿದೆ ಎಂದರು. ಸಾರ್ವಜನಿಕರು, ಪೋಷಕರು ಮಕ್ಕಳಿಗೆ ಪರಿಸರದ ಕುರಿತು ತಿಳಿಸಿಕೊಡಬೇಕು. ಅಭಿವೃದ್ಧಿಯ ಹೆಸರಿನಲ್ಲಿ ಹತ್ತು ಮರಗಳನ್ನು ಕಡಿದು ಮೂರು ಗಿಡನೆಡುವುದಲ್ಲ. ಅರಣ್ಯ ಇಲಾಖೆಯವರೂ ಕೂಡ ಇತ್ತ ಗಮನ ಹರಿಸಬೇಕು. ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು ಅರಣ್ಯ ಸಂಪತ್ತನ್ನು ಉಳಿಸಬೇಕು. ಇಂದಿನ ದಿನಗಳಲ್ಲಿ ಪರಿಸರ ಸಂರಕ್ಷಣೆಯ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಕಲಾಶಾಲೆಯ ಪ್ರಾಚಾರ್ಯ ಶಿಮಕುಮಾರ ಕೆಸರಮಡು, ಲೆಕ್ಕಪರಿಶೋಧಕ ಎನ್.ಬಿ.ಆರಾಧ್ಯಾ ಉಪಸ್ಥಿತರಿದ್ದರು. ನೂರಾರು ವಿದ್ಯಾರ್ಥಿಗಳು ಚಿತ್ರರಚನೆಯಲ್ಲಿ ತೊಡಗಿಸಿಕೊಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: