ಮೈಸೂರು

ಕವಿರತ್ನ ಕಾಳಿದಾಸರ ಜನ್ಮ ದಿನಾಚರಣೆ

ಮೈಸೂರು,ಜೂ.25:- ಪ್ರಜ್ಞಾವಂತ ನಾಗರೀಕ ವೇದಿಕೆ ವತಿಯಿಂದ ಮಹಾಕವಿ ಕವಿರತ್ನ ಕಾಳಿದಾಸರವರ ಜಯಂತಿಯನ್ನು ಆಚರಿಸಲಾಯಿತು.
ನಗರದ ಚಾಮುಂಡಿ ಪುರಂ ನ ಸಾರ್ವಜನಿಕ ನಗರ ಕೇಂದ್ರ ಗ್ರಂಥಾಲಯದಲ್ಲಿ  ನಗರ ಪಾಲಿಕೆ ಸದಸ್ಯಮಾ.ವಿ.ರಾಮಪ್ರಸಾದ್,ಹಾಗೂ ವೇದಿಕೆಯ ಗಣ್ಯರು ಕವಿರತ್ನ ಕಾಳಿದಾಸರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ  ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ ನಾವು ಇತಿಹಾಸದಲ್ಲಿ ಅನೇಕ ಶ್ರೇಷ್ಠ ಕವಿಗಳನ್ನು ನೋಡಿದ್ದೇವೆ ಅದರೆ ಮಹಾಕವಿ ಕಾಳಿದಾಸನಂತಹ ಕವಿ ಯಾರೂ ಇಲ್ಲ. ಅವರ ಅನೇಕ ಕಥೆ, ಕವಿತೆಗಳು ಇಂದಿಗೂ ಜೀವಂತವಾಗಿ ಉಳಿದಿದೆ. ಒಮ್ಮೆ ಒಂದು ಬಾರಿ ಮಹಾಕವಿಗಳನ್ನು ಗುರುತಿಸಲು ಸಭೆ ಕರೆದರಂತೆ. ಹತ್ತು ಜನ ಕವಿಗಳಲ್ಲಿ ಮಹಾಕವಿ ಕಾಳಿದಾಸರಿಗೆ ಸರಿಸಾಟಿಯಾಗಿ ಯಾರು ಇರಲಿಲ್ಲವಂತೆ. ಅಂತ ಮಹಾನ್ ವಿಶ್ವ ಸಂಸ್ಕೃತಿಯ ಮಹಾಕವಿ ಕಾಳಿದಾಸ, ಇವರನ್ನೂ ಇಂದಿಗೂ ಹಾಗೂ ಮುಂದಿನ ಪೀಳಿಗೆಗೂ ಕೂಡ ಸ್ಮರಿಸುವಂತೆ ಮಾಡಿದ್ದಾರೆ. ಅವರ ಹಾದಿಯನ್ನು ಇಂದಿಗೂ ಸ್ಮರಿಸುತ್ತಿರುವುದು ನಮ್ಮ ಪುಣ್ಯ ಎಂದರು.

ಕಾರ್ಯಕ್ರಮದಲ್ಲಿ ಪ್ರೊ.ರಾಮಶೇಷ, ಜೋಗಿ ಮಂಜು, ವಿಕ್ರಮ್, ಸಂದೀಪ್,ನಿಶಾಂತ್,  ,ಮಹದೇವ್, ಕಶ್ಯಪ್, ರವಿತೇಜ, ಮಂಜುಳ, ಭವ್ಯ ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: