ಸುದ್ದಿ ಸಂಕ್ಷಿಪ್ತ

ಅರ್ಜಿ ಆಹ್ವಾನ

ಮಡಿಕೇರಿ,ಜೂ.25:-  ಜಿಲ್ಲೆಯಲ್ಲಿ ಸಬಲ ಯೋಜನೆಯಡಿ 11 ರಿಂದ 18 ವರ್ಷದ ಕಿಶೋರಿ ಸಮೂಹಗಳ ನಾಯಕಿಯರಿಗೆ ಪೌಷ್ಠಿಕತೆ ಮತ್ತು ಆರೋಗ್ಯ ಶಿಕ್ಷಣ, ಕುಟುಂಬ ಕುರಿತು ಸಮಾಲೋಚನೆ ಮತ್ತು ಮಾರ್ಗದರ್ಶನ, ಕಿಶೋರಿಯರಲ್ಲಿ ಸಂತಾನೋತ್ಪತ್ತಿ ಮತ್ತು ಲೈಂಗಿಕ ಆರೋಗ್ಯ, ಮಕ್ಕಳ ಆರೈಕೆ ಪದ್ಧತಿ, ಗೃಹ ನಿರ್ವಹಣೆ, ಜೀವನ ಕೌಶಲ್ಯ ಅಭಿವೃದ್ಧಿ ತರಬೇತಿ ಮತ್ತು ಸಮಾಜ ಸೇವೆ ಈ ವಿಷಯಗಳಲ್ಲಿ ಒಂದು ವರ್ಷದ ಅವಧಿಗೆ ತರಬೇತಿ ನೀಡಲು ಅರ್ಹ ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸ್ವಯಂ ಸೇವಾ ಸಂಸ್ಥೆಯು ಮಹಿಳೆಯರ  ಮತ್ತು ಮಕ್ಕಳ ಅಭಿವೃದ್ಧಿ ಕಾರ್ಯಕ್ರಮಗಳನ್ನು  ನಡೆಸಿರುವುದರ ಅನುಭವ ಹೊಂದಿರತಕ್ಕದ್ದು. ಸಂಸ್ಥೆಯು ವಿಷಯ ಪರಿಣಿತರನ್ನು  ಸಂಪನ್ಮೂಲ ವ್ಯಕ್ತಿಗಳನ್ನು ಅವಶ್ಯವಾಗಿ ನೇಮಿಸಿಕೊಂಡಿರತಕ್ಕದ್ದು. ಆಸಕ್ತ ಸ್ವಯಂ ಸೇವಾ ಸಂಸ್ಥೆಗಳು ಸಬಲ ಯೋಜನೆಯಡಿ ಸ್ವಯಂ ಸೇವಾ ಸಂಸ್ಥೆಗಳನ್ನು ಆಯ್ಕೆ ಮಾಡಲು ಪಾಲಿಸಬೇಕಾದ ಮಾನದಂಡವನ್ನು ಉಪ ನಿರ್ದೇಶಕರ ಕಚೇರಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸುದರ್ಶನ ಅತಿಥಿ ಗೃಹದ ಹಿಂಭಾಗ, ಚೈನ್‍ಗೇಟ್ ಹತ್ತಿರ, ಮಡಿಕೇರಿ (ದೂರವಾಣಿ: 08272 228010) ಇಲ್ಲಿಂದ ಪಡೆದು ಜುಲೈ, 05 ರೊಳಗೆ ಅಗತ್ಯ ದಾಖಲಾತಿಗಳೊಂದಿಗೆ ಪ್ರಸ್ತಾವನೆ ಸಲ್ಲಿಸುವಂತೆ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಪ ನಿರ್ದೇಶಕರಾದ ಮಮ್ತಾಜ್ ಅವರು ಕೋರಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: