ಕ್ರೀಡೆಪ್ರಮುಖ ಸುದ್ದಿ

ಭಾರತದೆದುರು ವಿಂಡೀಸ್ ಉಡೀಸ್: ಕೊಹ್ಲಿ ಪಡೆಗೆ 105ರನ್ ಭರ್ಜರಿ ಜಯ

ಪ್ರಮುಖ ಸುದ್ದಿ, ಕ್ರೀಡೆ, ಪೋರ್ಟ್ ಆಫ್ ಸ್ಪೇನ್, ಜೂ.26: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯ ಮಳೆಯಿಂದ ರದ್ದಾದ್ದರಿಂದ ನಿರಾಸೆ ಅನುಭವಿಸಿದ್ದ ಭಾರತ ಎರಡನೇ ಪಂದ್ಯದಲ್ಲಿ 105ರನ್ ರನ್ ಗಳ ಭರ್ಜರಿ ಜಯ ಸಾಧಿಸಿ ಸರಣಿಯಲ್ಲಿ ಶುಭಾರಂಭ ಮಾಡಿದೆ. ಈ ಮೂಲಕ 5 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಕ್ವೀನ್‌ ಪಾರ್ಕ್‌ನಲ್ಲಿ ನಡೆದ ಪಂದ್ಯಕ್ಕೆ ಆರಂಭದಲ್ಲೇ ಮಳೆ ಅಡ್ಡಿಯಾಯಿತು. ಇದರಿಂದ ಪಂದ್ಯವನ್ನು 43 ಓವರ್ ಗಳಿಗೆ ಸೀಮಿತಗೊಳಿಸಲಾಯಿತು. ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ ಓವರ್ ಗಳಲ್ಲಿ 310ರನ್ ಗಳ ಬೃಹತ್ ಮೊತ್ತ ಪೇರಿಸಿತು. ಗುರಿ ಬೆನ್ನತ್ತಿದ್ದ ಆತಿಥೇಯ ವಿಂಡೀಸ್  ನಿಗದಿತ ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 205ರನ್ ಗಳಿಸಿ 105ರನ್ ಗಳಿಂದ ಸೋಲನುಭವಿಸಿತು.

ಉತ್ತಮ ಆರಂಭ: ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡಲು ಅವಕಾಶ ಪಡೆದ ಭಾರತ ಮತ್ತೊಮ್ಮೆ ಉತ್ತಮ ಆರಂಭ ಪಡೆಯಿತು. ಉನ್ನತ ಫಾರ್ಮ್ ನಲ್ಲಿರುವ ಶಿಖರ್ ಧವನ್ ಈ ಪಂದ್ಯದಲ್ಲೂ ಮಿಂಚಿದರು. ಅಬ್ಬರದ ಬ್ಯಾಟಿಂಗ್ ಮಾಡಿದ ಧವನ್ 63 ರನ್ ಗಳಿಸಿದರು. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದ ರಹಾನೆ ಈ ಪಂದ್ಯದಲ್ಲಿ ಅಮೋಘ ಶತಕ (103) ಸಿಡಿಸಿದರು. ಬಳಿಕ ಬಂದ ಯುವರಾಜ್ (14) ಮತ್ತೆ ನಿರಾಸೆ ಮೂಡಿಸಿದರೆ, ಪಾಂಡ್ಯಾ (4), ಧೋನಿ (13), ಜಾದವ್ (13) ರನ್ ಗಳಿಸಿದರು. ನಾಯಕ ವಿರಾಟ್ ಕೊಹ್ಲಿ ಭರ್ಜರಿ 87ರನ್ ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು.. ವಿಂಡೀಸ್ ಪರ ಅಲ್ಜಾರಿ ಜೋಸೆಫ್ 2, ಜೇಸನ್ ಹೋಲ್ಡರ್, ಆ್ಯಶ್ಲೆ ನರ್ಸ್, ಮಿಗ್ಯುಯೆಲ್ ಕ್ಯುಮಿನ್ಸ್ ತಲಾ 1 ಪಡೆದರು.

311 ರನ್‌ಗಳ ಬೃಹತ್ ಮೊತ್ತ ಬೆನ್ನತ್ತಿದ್ದ ವಿಂಡೀಸ್ ಆರಂಭದಲ್ಲೇ ಆಘಾತ ಎದುರಿಸಿತು. ವಿಂಡೀಸ್ ಪರ ಶಾಯ್ ಹೋಪ್ (81) ಹೊರತುಪಡಿಸಿದರೆ ಉಳಿದ ಯಾವೊಬ್ಬ ಆಟಗಾರನೂ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಎವಿನ್ ಲೂಯಿಸ್ (21), ಜೇಸನ್ ಹೋಲ್ಡರ್ (29), ರೋಸ್ಚನ್ ಚೇಸ್ (33) ರನ್ ಗಳಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.  ಭಾರತದ ಪರ ಉತ್ತಮ ಬೌಲಿಂಗ್‌ ಪ್ರದರ್ಶನ ನೀಡಿದ ಕುಲದೀಪ್ ಯಾದವ್ 3, ಭುವನೇಶ್ವರ್ ಕುಮಾರ್ 2 ಹಾಗೂ ರವಿಚಂದ್ರನ್‌ ಅಶ್ವಿನ್ 1 ವಿಕೆಟ್ ಪಡೆದರು. ಶತಕ ಸಿಡಿಸಿ ತಂಡದ ಗೆಲುವಿಗೆ ಕಾರಣವಾದ ಅಜಿಂಕ್ಯಾ ರಹಾನೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. (ವರದಿ ಬಿ.ಎಂ)

Leave a Reply

comments

Related Articles

error: