ಮೈಸೂರು

ಟ್ರ್ಯಾಕ್ಟರ್ ನಿಂದ ಆಯತಪ್ಪಿ ಬಿದ್ದು ವ್ಯಕ್ತಿ ಸಾವು

ಮೈಸೂರು, ಜೂ.26:  ಟ್ರ್ಯಾಕ್ಟರ್ ನಿಂದ ಆಯತಪ್ಪಿ ಕೆಳಗಡೆ ಬಿದ್ದು ವ್ಯಕ್ತಿಯೋರ್ವ  ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ  ಮುದ್ದಹಳ್ಳಿ ಗ್ರಾಮದಲ್ಲಿ ನಡೆದಿದೆ.

ದೇವರಾಜು (40) ಮೃತ ದುರ್ದೈವಿ.  ಹುಲ್ಲಹಳ್ಳಿಯ ಬೇಕರಿ ಕೃಷ್ಣ ಅವರ ಮನೆ ಮುಂದೆ ಇಟ್ಟಿಗೆಯನ್ನು ಅನ್ ಲೋಡ್ ಮಾಡುವ ವೇಳೆ ಘಟನೆ ಸಂಭವಿಸಿದೆ. ಕಳೆದ ರಾತ್ರಿ ದೇವರಾಜು ಮೃತಪಟ್ಟಿದ್ದು, ಆತನ ಮೃತದೇಹವನ್ನು ಹುಲ್ಲಹಳ್ಳಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಇದೀಗ ದೇವರಾಜುವಿನ ಪೋಷಕರು ಈ ಸಾವಿನ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ಬೇಕರಿ ಕೃಷ್ಣನ ವಿರುದ್ಧ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಸ್ಥಳಕ್ಕೆ ಹುಲ್ಲಹಳ್ಳಿ ಪೋಲಿಸರು ಭೇಟಿ ನೀಡಿ ಪರೀಶಿಲನೆ ನಡೆಸುತ್ತಿದ್ದಾರೆ. (ವರದಿ: ಕೆ.ಎಸ್, ಎಲ್.ಜಿ)

Leave a Reply

comments

Related Articles

error: