ಕರ್ನಾಟಕ

ನೀರಿನ ಹೊಂಡದಲ್ಲಿ ಬಿದ್ದು ಬಾಲಕ ಸಾವು

ರಾಜ್ಯ, (ವಿಜಯಪುರ) ಜೂ.26:  ನೀರಿನ ಹೊಂಡದಲ್ಲಿ ಕಾಲು ಜಾರಿ ಬಿದ್ದು ಬಾಲಕನೋರ್ವ ಸಾವನ್ನಪ್ಪಿರುವ ಘಟನೆ  ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ಪ್ರವೀಣ ಸಂತೋಷ ರಾಠೋಡ (12) ಮೃತ ವಿದ್ಯಾರ್ಥಿ. ಈತ ಜಾಲಿಹಾಳ ತಾಂಡಾದ ನಿವಾಸಿಯಾಗಿದ್ದು,  ಆರನೆಯ ತರಗತಿಯಲ್ಲಿ ಓದುತ್ತಿದ್ದ ಎನ್ನಲಾಗಿದೆ.

ಬಸವನಬಾಗೇವಾಡಿ ಪಟ್ಟಣದ ಗಾಂಧಿನಗರದ ಜ್ಞಾನದೀಪ ಶಾಲೆಯ ಹತ್ತಿರದ ಹೊಂಡದಲ್ಲಿ ಬಟ್ಟೆ ತೊಳೆಯುವ ವೇಳೆ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಬಸವನಬಾಗೇವಾಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ: ಕೆ.ಎಸ್, ಎಲ್.ಜಿ)

Leave a Reply

comments

Related Articles

error: