ಮೈಸೂರು

ಶಾಂತಿ ಸಭೆ

ಮೈಸೂರು(ಪಿರಿಯಾಪಟ್ಟಣ)ಜೂ.26:-: ರಂಜಾನ್ ಹಬ್ಬದ ಪ್ರಯುಕ್ತ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಪೋಲಿಸ್ ಠಾಣೆಯಲ್ಲಿ ಪೋಲಿಸ್ ಠಾಣಾಧಿಕಾರಿ ರಾಮಚಂದ್ರ ನಾಯಕ್ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್‍ಐ ರಾಮಚಂದ್ರನಾಯಕ್ ಅವರು, ರಂಜಾನ್ ಹಬ್ಬ ಸಮಿಪಿಸುತ್ತಿರುವ ಹಿನ್ನಲೆಯಲ್ಲಿ ಶಾಂತಿಯುತವಾಗಿ ಹಬ್ಬವನ್ನು ಆಚರಿಸಬೇಕು, ಯಾವುದೇ ರೀತಿಯಲ್ಲಿ ಶಾಂತಿಗೆ ಭಂಗ ಬಾರದಂತೆ ಎಚ್ಚರ ವಹಿಸಿ ಹಬ್ಬವನ್ನು ಆಚರಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಕಯಿಮ್ ಖಾನ್, ಅನ್ಸರ್ ಖಾನ್, ಕಭೀರ್ ಖಾನ್, ಸುಂದರನಾಯಕ್, ನಾರಾಯಣ, ಸೇರಿದಂತೆ ಗ್ರಾಮಸ್ಥರು, ಸಿಬ್ಬಂದಿಗಳಾದ ಎಎಸ್‍ಐ ವಿಜಯೆಂದರ್, ನಂದೀಶ್, ದೊಡ್ಡಸ್ವಾಮಿ, ಅಶೋಕ, ರವಿಕುಮಾರ್, ರವಿ, ಮಹದೇವ ಇದ್ದರು. (ಆರ್.ಬಿ.ಆರ್,ಎಸ್.ಎಚ್)

Leave a Reply

comments

Related Articles

error: