ಪ್ರಮುಖ ಸುದ್ದಿ

ದೇಶಾದ್ಯಂತ ರಂಜಾನ್ ಆಚರಣೆ: ಶುಭಾಶಯ ಕೋರಿದ ಪ್ರಣಬ್ ಮುಖರ್ಜಿ, ನರೇಂದ್ರ ಮೋದಿ

ಪ್ರಮುಖ ಸುದ್ದಿ, ನವದೆಹಲಿ, ಜೂ.26: ಮುಸಲ್ಮಾನರ ಪವಿತ್ರ  ಹಬ್ಬ ಈದ್-ಉಲ್-ಫಿತರ್ ಅನ್ನು ದೇಶದಾದ್ಯಂತ ಸಂಭ್ರಮ ಸಡಗರದಿಂದ ಸೋಮವಾರ ಆಚರಿಸಲಾಯಿತು.

ಶಾಂತಿಯ ಸಂಕೇತವಾದ ರಂಜಾನ್ ಹಬ್ಬದ ಅಂಗವಾಗಿ ಮುಸಲ್ಮಾನರು ಪರಸ್ಪರ ಸಿಹಿ ವಿತರಣೆ ಮಾಡಿ, ಶುಭಾಶಯ ವಿನಿಮಯ ಮಾಡಿಕೊಂಡು ಈದ್-ಉಲ್-ಫಿತರ್ ಆಚರಿಸಿದರು. ಮಸೀದಿಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ರಂಜಾನ್ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮುಸ್ಲಿಂ ಬಾಂಧವರಿಗೆ ಸೋಮವಾರ ಶುಭಾಶಯ ಕೋರಿದ್ದಾರೆ. ಭಾರತ ವಿಶ್ವದಲ್ಲೇ ವಿವಿಧತೆಯಲ್ಲಿ ಏಕತೆಯನ್ನೊಂದಿರುವ ದೇಶ. ತನ್ನ ವಿಶಿಷ್ಟ ಸಂಸ್ಕೃತಿ, ಸಂಸ್ಕಾರಗಳಿಂದ ವಿಶೇಷ ಹೆಸರುಗಳಿಸಿದೆ. ಇಂದು ದೇಶದಾದ್ಯಂತ ಈದ್ ಆಚರಣೆ ಮಾಡುತ್ತಿದ್ದು, ಎಲ್ಲಾ ಮುಸಲ್ಮಾನ ಬಾಂಧವರಿಗೂ ಶುಭಾಶಯ ಕೋರುತ್ತೇನೆ. ಎಲ್ಲರಿಗೂ ಶುಭವಾಗಲಿ ಎಂದು ಹೇಳಿದ್ದಾರೆ.

ಇವರಲ್ಲದೆ ಪ್ರಧಾನಿ, ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಹ ಶುಭಾಶಯ ಕೋರಿದ್ದಾರೆ. (ವರದಿ ಬಿ.ಎಂ)

 

Leave a Reply

comments

Related Articles

error: