ದೇಶಪ್ರಮುಖ ಸುದ್ದಿ

ಲಾಕರ್‍ನಲ್ಲಿಟ್ಟ ಚಿನ್ನ ಹಣ ಕಳವಾದರೆ ನೀವೇ ಜವಾಬ್ದಾರರು! ಆರ್‍ಬಿಐನಿಂದ ಗ್ರಾಹಕರಿಗೆ ಶಾಕ್

ನವದೆಹಲಿ, ಜೂ.26 : ಬ್ಯಾಂಕ್‍ ಲಾಕರ್‍ನಲ್ಲಿಟ್ಟ ಹಣ ಒಡವೆ ದಾಖಲಾತಿಗಳು ಸುರಕ್ಷಿತವಾಗಿರುತ್ತವೆ ಎಂಬುದು ಗ್ರಾಹಕರ ನಂಬಿಕೆ. ಇದಕ್ಕಾಗಿಯೇ ಜನ ಹಣವನ್ನು ಮನೆಯಲ್ಲಿಡದೆ ಬ್ಯಾಂಕ್ ಲಾಕರ್‍ನಲ್ಲಿಡುತ್ತಾರೆ. ಆದರೆ ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ಉತ್ತರ ಜನರನ್ನು ಆತಂಕಕ್ಕೆ ತಳ್ಳಿದೆ.

ಹೌದು, ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‍ಗಳು ಹೊಣೆಯಲ್ಲ ಎಂದು ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಿದ ಅರ್ಜಿಯೊಂದಕ್ಕೆ ಆರ್​​ಬಿಐ ಉತ್ತರ ಕೊಟ್ಟಿದೆ. ಬ್ಯಾಂಕ್ ಲಾಕರ್ ಲೂಟಿಯಾದರೆ ಅದಕ್ಕೆ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‍ಗಳು ಜವಾಬ್ದಾರರಲ್ಲ ಎಂಬುದು ಆರ್‍ಬಿಐ ವಿವರಣೆ.

ಈ ಮಾಹಿತಿಯಿಂದ ಅತೃಪ್ತರಾದ ಅರ್ಜಿದಾರ ವಕೀಲ ಕುಶ್ ಕಾಲ್ರಾ ಎಂಬುವವರು, ಇದರ ವಿರುದ್ಧ ಭಾರತೀಯ ಸ್ಪರ್ಧಾ ಆಯೋಗದ ಮೊರೆ ಹೋಗಿದ್ದಾರೆ. ಇಂಥಹ ನಿಯಮಗಳು ಸ್ಪರ್ಧಾತ್ಮಕತೆಗೆ ವಿರುದ್ಧವಾಗಿವೆ. ಮನೆಯಲ್ಲಿ ಕಳವಾಗಬಹುದು ಎಂಬ ಕಾರಣಕ್ಕೆ ಬ್ಯಾಂಕ್ ಲಾಕರ್‍ನಲ್ಲಿ ಅಮೂಲ್ಯ ವಸ್ತುಗಳನ್ನು ಇಡಲಾಗುತ್ತದೆ. ಆದರೆ ಲಾಕರ್ ಕೂಡ ಕಳವಾದರೆ ಅದರ ಹೊಣೆಯನ್ನು ಬ್ಯಾಂಕುಗಳು ಹೊರದೇ ಹೋದರೆ, ಬ್ಯಾಂಕ್ ಲಾಕರ್‍ಗೆ ಶುಲ್ಕ ಪಾವತಿಸಿ ವಸ್ತುಗಳನ್ನು ಇಡುವುದರಿಂದ ಏನು ಪ್ರಯೋಜನ? ಇನ್ನು ಬ್ಯಾಂಕ್ ಲಾಕರ್‍ಗಳನ್ನು ಯಾರು ಉಪಯೋಗಿಸುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ.

-ಎನ್.ಬಿ.

Leave a Reply

comments

Related Articles

error: