ಕರ್ನಾಟಕ

ಮೀನು ಹಿಡಿಯಲು ತೆರಳಿದ್ದ ಮೂವರು ನೀರು ಪಾಲು

ರಾಜ್ಯ, (ಮಂಗಳೂರು), ಜೂ.26: ಮಂಗಳೂರಿನ ಸಸಿಹಿತ್ಲು ಕಡಲ ಕಿನಾರೆಯಲ್ಲಿ ಮೀನು ಹಿಡಿಯಲು ತೆರಳಿದ್ದ ಮೂವರು ನೀರು ಪಾಲಾಗಿರುವ ದುರ್ಘಟನೆ ನಡೆದಿದೆ.

ಮೃತರನ್ನು ಯಶ್ವಂತ್, ಗುರುವಪ್ಪ ಹಾಗೂ ವಿಘ್ನೇಶ್ ಎಂದು ಗುರುತಿಸಲಾಗಿದೆ. ಈ ಮೂವರಿದ್ದ ದೋಣಿ  ಚಿತ್ರಾಪುವಿನಿಂದ ಸಸಿಹಿತ್ಲು ಕಡೆಗೆ ಹೋಗುತ್ತಿತ್ತು. ಸಸಿಹಿತ್ಲು ಅಳಿವೆ ಬಾಗಿಲಿನಲ್ಲಿ ಮೀನು ಹಿಡಿಯಲು ತೆರಳಿದ್ದ ಇವರು ದುರಾದೃಷ್ಟವಶಾತ್  ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ದುರಂತ ನಡೆದ ಸ್ಥಳ ನದಿ ನೀರು ಕಡಲು ಸೇರುವ ಜಾಗವಾಗಿದೆ ಎಂದು ತಿಳಿದು ಬಂದಿದೆ. (ವರದಿ: ಕೆ.ಎಸ್, ಎಲ್.ಜಿ)

Leave a Reply

comments

Related Articles

error: