ಮೈಸೂರು

ನಾಡಪ್ರಭು ಕೆಂಪೇಗೌಡ ಸೇವಾ ಭೀಷ್ಮ ಪ್ರಶಸ್ತಿ ಪ್ರದಾನ

ಮೈಸೂರು,ಜೂ.26:- ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಅರಿವು ಸಂಸ್ಥೆಯ ವತಿಯಿಂದ ನಾಡಪ್ರಭು ಕೆಂಪೇಗೌಡರ 527ನೇ ಜಯಂತಿಯ ಅಂಗವಾಗಿ ನಾಡಪ್ರಭು ಕೆಂಪೇಗೌಡ ಸೇವಾ ಭೀಷ್ಮ ಪ್ರಶಸ್ತಿಯನ್ನು ಸೋಮವಾರ ಪ್ರದಾನಿಸಲಾಯಿತು.

ಸನ್ಮಾನ ಸಮಾರಂಭವನ್ನು  ವಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ  ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್  ಮಾಜಿ ಸದಸ್ಯ ಹಾಗೂ ಮಾಜಿ ಸಿ.ಐ.ಟಿ.ಬಿ ಅಧ್ಯಕ್ಷ ಡಿ.ಮಾದೇಗೌಡ ಮಾತನಾಡಿ ನಾಡ ಪ್ರಭು ಕೆಂಪೇಗೌಡರು ಅನೇಕ ಕೊಡುಗೆ ನೀಡಿದ್ದಾರೆ. ಅವರ ನೆನಪು ಇಂದಿಗೂ ಚಿರಸ್ಮರಣೀಯವಾಗಿ ಉಳಿದಿದೆ. ಅವರ ಹಾದಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಅವರನ್ನು ಸ್ಮರಿಸಿ, ಸನ್ಮಾನಿತರಿಗೆ ಶುಭ ಹಾರೈಸಿದರು.

ಇದೇ ಸಂದರ್ಭ ವೈದ್ಯಕೀಯ ಕ್ಷೇತ್ರದ ಡಾ.ಎಂ.ಶಿವಣ್ಣ,  ಪೋಲಿಸ್ ಅಧಿಕಾರಿ ಓಂಕಾರಪ್ಪ, ಸಹಕಾರಿ ಕ್ಷೇತ್ರ ಡಿ.ಟಿ.ಪ್ರಕಾಶ್, ಸಮಾಜ ಸೇವಾ  ಕ್ಷೇತ್ರ ಡಾ.ಥಾಮಸ್, ರೈತ ಹೋರಾಟಗಾರ ಬೆಳಗೊಳ ಸುಬ್ರಹ್ಮಣ್ಯ, ರಾಜಕೀಯ ಕ್ಷೇತ್ರದ ಆನಂದ್, ಸಾಮಾಜಿಕ ಹೋರಾಟಗಾರ ಕುಮಾರ್ ಗೌಡ, ಹಿಂದೂಪರ ಹೋರಾಟಗಾರ ಮೈಕಾ ಪ್ರೇಮ್ ಕುಮಾರ್, ಪತ್ರಿಕೋದ್ಯಮ ಕ್ಷೇತ್ರ ಮಧುಸೂಧನ್ ಆರ್, ಧಾರ್ಮಿಕ ಕ್ಷೇತ್ರದಿಂದ ಗಿರಿಧರ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅರಿವು ಸಂಸ್ಥೆಯ ಅಧ್ತಕ್ಷ ಶ್ರೀಕಾಂತ್ ಕಶ್ಯಪ್, ಸಮಾಜ ಸೇವಕರಾದ ಕೆ.ರಘುರಾಂ, ಬಿ.ಜೆ.ಪಿ. ನಗರಾಧ್ಯಕ್ಷ ಡಾ.ಮಂಜುನಾಥ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ್ ಗೌಡ, ಜೋಗಿ ಮಂಜು, ಮತ್ತಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: