ಮೈಸೂರು

ಸಾಲಬಾಧೆ ತಾಳಲಾರದೇ ರೈತ ನೇಣಿಗೆ ಶರಣು

ಮೈಸೂರು,ಜೂ.26:- ಮುಂಗಾರುಮಳೆ ಕೈಕೊಟ್ಟ ಕಾರಣ  ಬೆಳೆ ನಷ್ಟ, ಸಾಲಬಾಧೆಯಿಂದ ತತ್ತರಿಸಿದ ಅನ್ನದಾತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲೂಕಿನ ಸಾಲಿಗ್ರಾಮದಲ್ಲಿ ನಡೆದಿದೆ.

ಮೃತನನ್ನು ಹರೀಶ್ (45) ಎಂದು ಗುರುತಿಸಲಾಗಿದೆ. ಈತ ತಂಬಾಕು, ಭತ್ತ ಬೆಳಯಲು ಬ್ಯಾಂಕಿನಲ್ಲಿ ಸಾಲ ಮಾಡಿಕೊಂಡಿದ್ದ. ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ 3 ಲಕ್ಷ ರೂಪಾಯಿ ಸಾಲ ಪಡೆದಿದ್ದ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಚಿನ್ನ ಅಡವಿಟ್ಟು 3 ಲಕ್ಷ ರೂಪಾಯಿ ಸಾಲ ಪಡೆದಿದ್ದ ರೈತ. ಆದರೆ ಸಕಾಲಕ್ಕೆ ಮಳೆಯಾಗದ ಕಾರಣ ತಂಬಾಕು ಬೆಳೆ ನಾಶವಾಗಿತ್ತು. ಇದರಿಂದ ತೀವ್ರವಾಗಿ ಮನನೊಂದಿದ್ದ ರೈತ ಸೋಮವಾರ ತನ್ನ ಜಮೀನಿನಲ್ಲೆ, ಪಂಚೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: