ಕರ್ನಾಟಕ

ರಂಜಾನ್ ಆಚರಣೆ ವಿವಾದ: ಎರಡು ಬಣಗಳ ನಡುವೆ ಸಂಘರ್ಷ

ರಾಜ್ಯ, (ಮಂಗಳೂರು) ಜೂ.26: ಮಂಗಳೂರಿನ ಇತಿಹಾಸ ಪ್ರಸಿದ್ದ ಉಳ್ಳಾಲ ದರ್ಗಾದಲ್ಲಿ ರಂಜಾನ್ ಆಚರಣೆಗೆ ಸಂಬಂಧಿಸಿದಂತೆ  ಎರಡು ಬಣಗಳ ಮಧ್ಯೆ ವಿವಾದ- ಸಂಘರ್ಷ ನಡೆದಿದೆ.

ಚಂದ್ರ ದರ್ಶನವಾಗಿದ್ದ ಹಿನ್ನೆಲೆಯಲ್ಲಿ ನಿನ್ನೆಯೇ ಕರಾವಳಿಯಲ್ಲಿ ರಂಜಾನ್ ಆಚರಿಸಲಾಗಿತ್ತು. ಆದರೆ ಉಳ್ಳಾಲ ಖಾಜಿ ಕೂರ ತಂಗಳ್ ಮಾತ್ರ ಇಂದು ಆಚರಿಸುವಂತೆ ಉಳ್ಳಾಲ ದರ್ಗಾ ವ್ಯಾಪ್ತಿಯ ಮಸೀದಿಗಳಿಗೆ ಸೂಚನೆ ನೀಡಿದ್ದರು.

ಆದರೆ ಇದನ್ನು ವಿರೋಧಿಸಿ ಒಂದು ಬಣ ನಿನ್ನೆಯೇ ರಂಜಾನ್ ಆಚರಿಸಿತ್ತು. ಆದರೆ ಇನ್ನೊಂದು ಬಣ ಇಂದು ಆಚರಣೆಗೆ ಮುಂದಾದ ವೇಳೆ ವಿವಾದ ಉಂಟಾಗಿ ಉಳ್ಳಾಲ ದರ್ಗಾ ಆಡಳಿತ ಮಂಡಳಿ ಪ್ರಾರ್ಥನೆಗೆ ಅವಕಾಶ ನೀಡದೆ ದರ್ಗಾಗೆ ಬೀಗ ಜಡಿದಿದೆ. (ವರದಿ: ಎಸ್.ಎನ್, ಎಲ್.ಜಿ)

 

Leave a Reply

comments

Related Articles

error: