ಪ್ರಮುಖ ಸುದ್ದಿಮೈಸೂರು

ಮಾವುತರನ್ನು ಸತ್ಕರಿಸಿದ ಶೋಭಾ ಕರಂದ್ಲಾಜೆ

shobha-webದಸರಾ ಉತ್ಸವದ ಜಂಬೂಸವಾರಿಯಲ್ಲಿ ಅಂಬಾರಿ ಹೊರಲಿರುವ ಆನೆ ಅರ್ಜುನನಿಗೆ ಉಡುಪಿ ಮತ್ತು ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ವಿಶೇಷ ಪೂಜೆ ಸಲ್ಲಿಸಿದರು.

ಮೈಸೂರು ದಸರಾ ಉತ್ಸವದಲ್ಲಿ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಮಾವುತರು, ಕಾವಾಡಿಗಳು ಮತ್ತವರ ಕುಟುಂಬದವರನ್ನು ಸಂಸದೆ ಶೋಭಾ ಕರಂದ್ಲಾಜೆ ಸತ್ಕರಿಸಿದರು. ತಾನೇ ಸ್ವತಃ ಅವರಿಗೆ ಉಪಹಾರ ಬಡಿಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮಾವುತರು, ಕಾವಾಡಿಗಳು 10ತಿಂಗಳುಗಳ ಕಾಲ ಕಾಡಿನಲ್ಲಿರುತ್ತಾರೆ. 2ತಿಂಗಳು ನಾಡಿಗೆ ಬರುತ್ತಾರೆ. ಪ್ರತಿವರ್ಷವೂ ಅವರು ನಮ್ಮನ್ನು ನೆನಪು ಮಾಡಿಕೊಳ್ಳುತ್ತಾರೆ. ಹಿಂದೆ ಮೈಸೂರು ಉಸ್ತುವಾರಿ ಸಚಿವೆ ಆಗಿದ್ದ ಸಂದರ್ಭದಲ್ಲಿ ತಾಯಿ ಚಾಮುಂಡೇಶ್ವರಿಯ ಸೇವೆ ಮಾಡೋ ಅವಕಾಶ ದೊರಕಿತ್ತು. ಜನತೆ ನನ್ನನ್ನು ಗೆಲ್ಲಿಸಿದ್ದಾರೆ ಅಂದರೆ ಅವರ ಸೇವೆ ಮಾಡಬೇಕಾಗಿರೋದು ನನ್ನ ಕರ್ತವ್ಯ. ಮಾವುತರ ಮಕ್ಕಳು ಶಾಲೆಗೆ ಹೋಗುತ್ತಿರುವುದನ್ನು ತಿಳಿದು ತುಂಬಾ ಸಂತೋಷವಾಯಿತು ಎಂದರು.

Leave a Reply

comments

Related Articles

error: