ಮೈಸೂರು

ಕೆಲವೇ ಗಂಟೆಗಳಲ್ಲಿ ಕಲೆ-ಸಂಸ್ಕೃತಿಯನ್ನು ಅನಾವರಣಗೊಳಿಸಲಿವೆ ಸ್ತಬ್ಧ ಚಿತ್ರಗಳು

tablo-3ಐತಿಹಾಸಿಕ ದಸರಾ ಮಹೋತ್ಸವದ ಜಂಬೂ ಸವಾರಿಗೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಜಂಬೂ ಸವಾರಿ ವೀಕ್ಷಣೆಗೆ ಮೈಸೂರು ನಗರವೇ ಸಜ್ಜಾಗಿದೆ. ಜಂಬೂ ಸವಾರಿ ವೀಕ್ಷಿಸಲು ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸಿದ್ದು ನಗರದಲ್ಲಿ ಈಗಾಗಲೇ ಬೀಡು ಬಿಟ್ಟಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ರಾಜ್ಯದ ವಿವಿಧ ಇಲಾಖೆಗಳು ಜಂಬೂ ಸವಾರಿಯ ವೇಳೆ ಸ್ತಬ್ಧ ಚಿತ್ರಗಳನ್ನು ಪ್ರದರ್ಶಿಸಿ ಜನಮನ ರಂಜಿಸಲಿವೆ.

ಜಂಬೂ ಸವಾರಿಯಲ್ಲಿ ಉಡುಪಿ-ಸೇಂಟ್ ಮೇರಿ ದ್ವೀಪ, ಉತ್ತರಕನ್ನಡ-ಮಾರಿಕಾಂಬ ದೇವಾಲಯ ಶಿರಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ-ಒಗ್ಗೂಡಿದ ಕರ್ನಾಟಕಕ್ಕೆ 60ವರ್ಷ, ಕಲಬುರಗಿ-ಶ್ರೀಚಂದ್ರಲಾಂಬಾ ಪರಮೇಶ್ವರಿ ದೇವಸ್ಥಾನ ಹಾಗೂ ಸ್ತೂಪ, ಕೊಡಗು-ಕೊಡಗು ಬುಡಕಟ್ಟು ಸಮುದಾಯ ಬಂಧು, ಕೊಪ್ಪಳ-ಸಂಯುಕ್ತ ಗ್ರಾಮ ಪಂಚಾಯತ್ ಘನತ್ಯಾಜ್ಯ ವಿಲೇವಾರಿ ಘಟಕ, ಕೋಲಾರ-ಸೋಮೇಶ್ವರ ದೇವಾಲಯ, ಗದಗ-ಗದುಗಿನ ಸಂಗೀತಕಲಾ ಜಗದ್ಗುರು, ಚಾಮರಾಜನಗರ-ಸಮಾನತೆಗಾಗಿ ಸರ್ಕಾರದ ಸಪ್ತಹೆಜ್ಜೆಗಳು, ಚಿಕ್ಕಬಳ್ಳಾಪುರ-ಶ್ರೀಕ್ಷೇತ್ರ ಕೈವಾರದ ಬಕಾಸುರ ವಧೆ, ಪ್ರವಾಸೋದ್ಯಮ ಇಲಾಖೆ-ವನ್ಯಮೃಗಗಳ ವೈವಿಧ್ಯತೆಯ ನೆಲೆ, ಚಿಕ್ಕಮಗಳೂರು-ವಿದ್ಯಾಶಂಕರ ದೇವಾಲಯ, ಚಿತ್ರದುರ್ಗ-ಅಭಿವೃದ್ಧಿಗಾಗಿ ಸೌರಶಕ್ತಿ ಮತ್ತು ಪವನಶಕ್ತಿ, ತುಮಕೂರು-ಕಲ್ಪತರು ನಾಡು ಸಿರಿಧಾನ್ಯಗಳ ಬೀಡು, ವಾರ್ತಾ ಇಲಾಖೆ-ಜನತೆಯ ಕಡೆಗೆ ಭರವಸೆಯ ನಡಿಗೆ, ದಕ್ಷಿಣ ಕನ್ನಡ-ರಾಣಿ ಅಬ್ಬಕ್ಕ ಮಹಾದೇವಿ, ದಾವಣಗೆರೆ-ಶ್ರೀರಂಗನಾಥ ಸ್ವಾಮಿ ದೇವಾಲಯ-ಜಗಳೂರು, ಧಾರವಾಡ-ವೀರಯೋಧ ಹನುಮಂತಪ್ಪ, ಬಳ್ಳಾರಿ-ಲಕ್ಷ್ಮಿ ನರಸಿಂಹ ಶಿಲಾಮೂರ್ತಿ, ಆರೋಗ್ಯ ಇಲಾಖೆ-ಎಲ್ಲರಿಗೂ ಆರೋಗ್ಯ ಎಲ್ಲೆಡೆಯೂ ಆರೋಗ್ಯ.

tablo-2

ಬಾಗಲಕೋಟೆ-ಸಂಗಮೇಶ್ವರ ದೇವಾಲಯ ಪಟ್ಟದಕಲ್ಲು, ಬೀದರ್-ಅಂತರಜಲ ಮರು ಪೂರೈಕೆ, ಬೆಳಗಾವಿ-ಭೀಮಗಡ ವನ್ಯಧಾಮ, ಶಿಕ್ಷಣ ಇಲಾಖೆ-ಶಿಕ್ಷಣದ ಸಾರ್ವತ್ರೀಕರಣ, ಬೆಂಗಳೂರು(ಗ್ರಾ)-ಪಾರಂಪರಿಕ ತಾಣಗಳು ಹಾಗೂ ಅಭಿವೃದ್ಧಿ, ಬೆಂಗಳೂರು(ನ)-ರಾಜ್ಯ ಕೇಂದ್ರ ಗ್ರಂಥಾಲಯ-ಶತಮಾನೋತ್ಸವ, ಮೈಸೂರು-ರಾಜಮಾತೆಯರ ಕೊಡುಗೆಗಳು, ಮಂಡ್ಯ-ಸತ್ಯಾಗ್ರಹ ಸೌಧ, ಯಾದಗೀರ್-ಯಾದಗೀರ್ ಕೋಟೆ ಚಿಂತನಹಳ್ಳಿ ಗವಿಸಿದ್ಧಲಿಂಗೇಶ್ವರ, ರಾಮನಗರ –ಚನ್ನಪಟ್ಟಣದ ಗೊಂಬೆ ಪರಸೆ, ಸ್ತಬ್ಧಚಿತ್ರ ಉಪಸಮಿತಿ-ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ 125ನೇ ಜನ್ಮದಿನೋತ್ಸವ, ರಾಯಚೂರು-ಹಟ್ಟಿಚಿನ್ನದ ಗಣಿ, ವಿಜಯಪುರ-ಶ್ರೀಲಾಲಬಹದ್ದೂರ್ ಶಾಸ್ತ್ರೀ ಸಾಗರ-ಆಲಮಟ್ಟಿ ಜಲಾಶಯ,ಶಿವಮೊಗ್ಗಾ-ಇಕ್ಕೇರಿ ದೇವಸ್ಥಾನ ಮತ್ತು ಜೋಗ್ ಫಾಲ್ಸ್, ಹಾವೇರಿ-ಸ್ವಾತಂತ್ರ್ಯ ಹೋರಾಟಗಾರರು(ವೀರಸೌಧ), ಹಾಸನ-2018-ಮಹಾಮಸ್ತಕಾಭಿಷೇಕ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ-ಅಲ್ಪಸಂಖ್ಯಾತರ ಇಲಾಖಾ ಶೈಕ್ಷಣಿಕ ಕಾರ್ಯಕ್ರಮಗಳು,ಪುರುತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ-ಬೆಂಗಳೂರು ವಸ್ತು ಸಂಗ್ರಹಾಲಯ 150ನೇ ವರ್ಷದ ಸಂಭ್ರಮ, ಎಸ್.ಬಿ.ಎಂ-ಬ್ಯಾಂಕ್ ಸೇವೆಗಳು, ಕಾವೇರಿ ನೀರಾವರಿ ನಿಗಮ -ಜನಜಾಗೃತಿಯ ಬಗ್ಗೆ ಜನಾಂದೋಲನ, ವಾಕ್ ಶ್ರವಣ ಸಂಸ್ಥೆ-ಇಲಾಖಾ ಕಾರ್ಯಕ್ರಮಗಳು, ಭಾರತ ಪೆಟ್ರೋಲಿಯಂ- ಪರಿಸರ ಸ್ನೇಹಿ ಇಂಧನ ಸ್ತಬ್ಧ ಚಿತ್ರಗಳು ಜನರನ್ನು ಆಕರ್ಷಿಸಲಿವೆ.

ಒಟ್ಟು 42 ಸ್ತಬ್ಧ ಚಿತ್ರಗಳು 50ಕ್ಕೂ ಅಧಿಕ ಜಾನಪದ ಕಲಾತಂಡಗಳು ಅರಮನೆ ಆವರಣದಿಂದ ಹೊರಟು ಆಯುರ್ವೇದ ವೃತ್ತ , ಸಯ್ಯಾಜಿರಾವ್ ವೃತ್ತ, ಕೆ.ಆರ್.ವೃತ್ತದ ಮೂಲಕ  ರಾಜಪಥದುದ್ದಕ್ಕೂ ಸಂಚರಿಸಿ ಕನ್ನಡ ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸಲಿದ್ದು ಬನ್ನಿಮಂಟಪವನ್ನು ತಲುಪಲಿದೆ.

Leave a Reply

comments

Related Articles

error: