ಮೈಸೂರು

ವಿಶ್ವ ಮಾದಕ ವಸ್ತುಗಳ ವಿರೋಧಿ ದಿನಾಚರಣೆಗೆ ಚಾಲನೆ

ಮೈಸೂರು, ಜೂ.26: ಶ್ರೀ ಧರ್ಮಸ್ಥಳದ ಮಂಜುನಾಥ ಮಹಿಳಾ ಸ್ವಸಹಾಯ ಸಂಘದ ವತಿಯಿಂದ ಹೆಬ್ಬಾಳಿನ 26ನೇ ವಾರ್ಡಿನಲ್ಲಿ  ಸೋಮವಾರ ‘ವಿಶ್ವ ಮಾದಕ ವಸ್ತುಗಳ ವಿರೋಧಿ  ದಿನಾಚರಣೆ’ ಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ವಿದ್ಯಾರ್ಥಿಗಳು ರಸ್ತೆಗಳಲ್ಲಿ ಬ್ಯಾನರ್ ಹಿಡಿದು ಜಾಥಾದಲ್ಲಿ ಅರಿವು ಮೂಡಿಸಿದರು.

ಈ ಕಾರ್ಯಕ್ರಮದಲ್ಲಿ ಪೊಲೀಸ್ ಅಕಾಡೆಮಿಯ ನಿರ್ದೇಶಕಿ ಧರಣಿದೇವಿ ಮಾಲಗತ್ತಿ,  ನಗರಪಾಲಿಕೆ ಸದಸ್ಯರಾದ ಚಲುವೇಗೌಡ, ಶಿವಣ್ಣ, ಜಗದೀಶ್ ಹಾಗೂ ಎಂ. ಜೆ. ಕಿರಣ್ ಗೌಡ ಮತ್ತಿತರರು ಭಾಗವಹಿಸಿದ್ದರು. (ವರದಿ: ಎಸ್. ಎನ್, ಎಲ್.ಜಿ)

Leave a Reply

comments

Related Articles

error: