ಕರ್ನಾಟಕಪ್ರಮುಖ ಸುದ್ದಿ

ಮೆಟ್ರೋದಲ್ಲಿ ಹಿಂದಿ ನಾಮಫಲಕ ಬಳಕೆ ವಿಚಾರ: ಕನ್ನಡಕ್ಕೆ ಆದ್ಯತೆ ನೀಡಿ ಎಂದ ಜಾರ್ಜ್

ಪ್ರಮುಖ ಸುದ್ದಿ, ಬೆಂಗಳೂರು, ಜೂ.26: ಮೊಟ್ಟ ಮೊದಲ ಬಾರಿಗೆ  ರಾಜ್ಯ ಸರ್ಕಾರ  ಕೆಂಪೇಗೌಡ ಜಯಂತಿಯನ್ನು ಆಚರಿಸುತ್ತಿದೆ. ಕೆಂಪೇಗೌಡರ ದೂರದೃಷ್ಟಿಯಿಂದ ಬೆಂಗಳೂರು ಈ ಮಟ್ಟಕ್ಕೆ ಬೆಳೆದಿದೆ.  ಹೀಗಾಗಿ ಅವರನ್ನು ನಾವೆಲ್ಲ ನೆನೆಸಿಕೊಳ್ಳಬೇಕು ಎಂದು ಬೆಂಗಳೂರು ಅಭಿವೃದ್ದಿ ಸಚಿವ ಕೆ.ಜೆ ಜಾರ್ಜ್ ಹೇಳಿದರು.

ಫ್ರೇಜರ್ ಟೌನ್ ನಲ್ಲಿರುವ ಬಿಲಾಲ್ ಮಸೀದಿ ಅಧ್ಯಕ್ಷ ಅಮೀರ್ ಜಾನ್ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು. ಕೆಂಪೇಗೌಡರ ನೆನಪನ್ನು ಉಳಿಸಲು ಸರ್ಕಾರ ಹಲವು ಕಾರ್ಯಕ್ರಮಗಳನ್ನು ಮಾಡಲಿದೆ ಎಂದೂ ಸಹ ತಿಳಿಸಿದರು.

ಮೆಟ್ರೋದಲ್ಲಿ ಹಿಂದಿ ನಾಮಫಲಕ ಬಳಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,  ಈ ವಿಚಾರದ ಬಗ್ಗೆ ಈಗಾಗಲೇ ನಾನು ಪ್ರತಿಕ್ರಿಯೆ ಕೊಟ್ಟಿದ್ದೇನೆ. ಕನ್ನಡಕ್ಕೆ ಆದ್ಯತೆ ಕೊಡಿ. ಇದನ್ನು ದೊಡ್ಡದು ಮಾಡುವ ಅಗತ್ಯವಿಲ್ಲ ಎಂದು ಹೇಳಿದರು.

ಗೃಹ ಸಚಿವ ಸ್ಥಾನಕ್ಕೆ ಜಾರ್ಜ್ ಹೆಸರು ಕೇಳಿ ಬರುತ್ತಿರುವ ಹಿನ್ನೆಲೆ ಪ್ರತಿಕ್ರಿಯೆ ನೀಡಿದ ಅವರು, ನನಗೆ  ಸದ್ಯಕ್ಕೆ ಬೆಂಗಳೂರು ಅಭಿವೃದ್ಧಿ ಸಚಿವನಾಗಿ ಕಾರ್ಯ ನಿರ್ವಹಿಸಲು ಜವಾಬ್ದಾರಿ ಕೊಟ್ಟಿದ್ದಾರೆ. ನಾನು ಅದನ್ನೇ ಮಾಡುತ್ತೇನೆ ಎಂಬುದಾಗಿ ತಿಳಿಸಿದರು.

ರಂಜಾನ್ ಹಿನ್ನೆಲೆಯಲ್ಲಿ ಪ್ರತಿ ವರ್ಷ ಅಮೀರ್ ಜಾನ್ ನಿವಾಸಕ್ಕೆ ಆಗಮಿಸುವ ಕೆ. ಜೆ ಜಾರ್ಜ್, ಪ್ರತಿ ವರ್ಷದಂತೆ ಈ ವರ್ಷವೂ ಅಮೀರ್ ಜಾನ್ ನಿವಾಸಕ್ಕೆ ಆಗಮಿಸಿ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಷಯ ಕೋರಿದರು. (ಎಸ್.ಎನ್, ಎಲ್.ಜಿ)

Leave a Reply

comments

Related Articles

error: