ಕರ್ನಾಟಕಪ್ರಮುಖ ಸುದ್ದಿ

ರಾಷ್ಟ್ರಪತಿ ಚುನಾವಣೆ : ಮತದಾನಕ್ಕಾಗಿ ವಿಧಾನಸೌಧದಲ್ಲಿ ವ್ಯವಸ್ಥೆ

ಬೆಂಗಳೂರು, ಜೂನ್ 26 : ರಾಷ್ಟ್ರಪತಿ ಚುನಾವಣೆಯು ಮುಂದಿನ ತಿಂಗಳ 17 ರಂದು ನಡೆಯಲಿದ್ದು, ಚುನಾವಣೆಗಾಗಿ ಬೆಂಗಳೂರು ವಿಧಾನಸೌಧದಲ್ಲಿ ಮತಗಟ್ಟೆ ವ್ಯವಸ್ಥೆ ಮಾಡಲಾಗಿದೆ.

ವಿಧಾನಸೌಧದ 106 ನೇ ಸಂಖ್ಯೆಯ ಕೊಠಡಿಯನ್ನೇ ಮತದಾನ ಕೇಂದ್ರವನ್ನಾಗಿ ಪರಿವರ್ತಿಸಲು ನಿರ್ಧರಿಸಲಾಗಿದ್ದು, ರಾಜ್ಯದ ಶಾಸಕರು, ಸಂಸದರು ಇಲ್ಲಿಯೇ ಮತ ಚಲಾಯಿಸಬಹುದು. ಮತದಾನದ ವೇಳೆ ಚುನಾವಣಾಧಿಕಾರಿಗಳು ಕೊಡುವ ಪೆನ್ನುಗಳನ್ನೇ ಬಳಸಬೇಕು. ಭಾರತೀಯ ಸಂಖ್ಯಾ ವಾಚಕಗಳು, ರೋಮನ್ ಅಂಕಿಗಳಲ್ಲೇ ಅಥವಾ ಭಾರತದ ಮತ್ಯಾವುದೇ ಭಾಷೆಗಳಲ್ಲಿನ ಅಂಕಿಗಳನ್ನು ಬರೆಯಬೇಕು. ಅಕ್ಷರಗಳನ್ನು ನಮೂದಿಸಬಾರದು ಎಂದು ಸೂಚಿಸಲಾಗಿದೆ.

ಈ ಬಗ್ಗೆ ಅಧಿಕೃತ ಪ್ರಕಟಣೆಯನ್ನು ಸರ್ಕಾರ ಈಗಾಗಲೇ ಹೊರಡಿಸಿದ್ದು, ಮತದಾನದ ಅರ್ಹತೆಯುಳ್ಳ ಎಲ್ಲರೂ ಕಡ್ಡಾಯವಾಗಿ ಮತದಾನ ದಿನದಂದು ಗುರುತಿನ ಚೀಟಿ ತರಬೇಕು.

-ಎನ್.ಬಿ.

Leave a Reply

comments

Related Articles

error: