ಕರ್ನಾಟಕ

ಸಾಂಕ್ರಾಮಿಕ ರೋಗಗಳು ಹರಡದಂತೆ ಜನರಲ್ಲಿ ಅರಿವು ಮೂಡಿಸಿ: ಡಾ.ಗೋಪಾಲ್

ರಾಜ್ಯ(ಚಾಮರಾಜನಗರ)ಜೂ.26:- ಡೆಂಗಿ ಜ್ವರ ಹಾಗೂ ಚಿಕನ್‍ಗೂನ್ಯ ದಂತಹ ಸಾಂಕ್ರಾಮಿಕ ರೋಗಗಳು ತಾಲೂಕಿನಲ್ಲಿ ಹರಡದಂತೆ ಜನರಲ್ಲಿ ಅರಿವು ಮೂಡಿಸಿ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಗೋಪಾಲ್  ತಿಳಿಸಿದರು.
ಕೊಳ್ಳೇಗಾಲ ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಶನಿವಾರ ನಡೆದ ತಾಲೂಕು ಅಧಿಕಾರಿಗಳ ಸಮನ್ವಯ ಸಭೆಯಲ್ಲಿ ತಾಲೂಕಿನ ಅಧಿಕಾರಿಗಳಿಗೆ ಹಾಗೂ ಆಶಾ ಕಾರ್ಯಕರ್ತೆಯರುಗಳಿಗೆ ತಿಳಿಸಿದರು. ಸಾರ್ವಜನಿಕರು ಬಳಸುವ ನೀರಿನ ತಾಣಗಳನ್ನು ಶುದ್ಧಿಕರಣಗೊಳಿಸಬೇಕು. ಗುಂಡಿಗಳು ಹಾಗೂ ತಗ್ಗುಗಳನ್ನು ಮುಚ್ಚಿಸಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಲಾರ್ವಾ ಸೊಳ್ಳೆಯಿಂದಾಗಿ ಡೆಂಗಿ ಜ್ವರವು ಹೆಚ್ಚುತ್ತದೆ ಸೊಳ್ಳೆ ಉತ್ಪತ್ತಿಯಾಗದಂತೆ ನಿಯಂತ್ರಿಸಲು ಜನರಿಗೆ ಅರಿವು ಮೂಡಿಸಿ ಎಂದು ತಿಳಿಸಿದರು.
ತಾಲೂಕಿನಲ್ಲಿ ಡೆಂಗಿ ಜ್ವರಕ್ಕೆ 4 ಮಂದಿ, ಚಿಕನ್‍ಗೂನ್ಯ ರೋಗಕ್ಕೆ 6 ಮಂದಿ ತುತ್ತಾಗಿದ್ದಾರೆ. ಸಾಂಕ್ರಾಮಿಕ ರೋಗಕ್ಕೆ ಜನರು ತುತ್ತಾಗದಂತೆ ತಾಲೂಕಿನ ಜನರಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಸಾಂಕ್ರಾಮಿಕ ರೋಗದ ಬಗ್ಗೆ ಜನರಲ್ಲಿ ಅರಿವು ಮೂಡಿಸುವಂತೆ ನೋಡಿಕೊಳ್ಳಿ ಎಂದು ತಿಳಿಸಿದರು.
ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಡಾ.ದರ್ಶನ್ ಮಾತನಾಡಿ, ನೀರು ಸಂಗ್ರಹವಾಗುವ ಸ್ಥಳಗಳನ್ನು ಶುದ್ಧಿಕರಿಸಿ ಬಳಸುವಂತೆ ಗ್ರಾಮೀಣ ಜನರಿಗೆ ಅರಿವು ಮೂಡಿಸಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಶ್ರೀನಿವಾಸ್‍ಪ್ರಸಾದ್, ಹನೂರು ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮೇಗೌಡ, ಕೊಳ್ಳೇಗಾಲ ಬಿಆರ್‍ಸಿ ಮಂಜುಳ, ಚೆಸ್ಕಾಂ ಎಇಇ ಲಿಂಗರಾಜು, ನಗರಸಭೆ ಆರೋಗ್ಯ ನೀರಿಕ್ಷಕರು ಶ್ರೀಕಾಂತ್ ವಿಭೂತಿ, ತಾಲೂಕು ಆರೋಗ್ಯ ನಿರೀಕ್ಷಕ ಶಿವರಾಮೇಗೌಡ ಹಾಗೂ ಅಧಿಕಾರಿಗಳು ಆಶಾ ಕಾರ್ಯಕರ್ತೆಯರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: