ಮೈಸೂರು

ಬಸವಣ್ಣ ತಮ್ಮ ವಚನಗಳ ಮೂಲಕ ಜಗವನ್ನು ಬೆಳಗಿದರು: ನಂದೀಶ್

ಮೈಸೂರು, ಜೂ.26: ಬಸವಣ್ಣ ತಮ್ಮ ವಚನಗಳ ಮೂಲಕ ಜಗವನ್ನು ಬೆಳಗಿ ಜಗಜ್ಯೋತಿ ಬಸವೇಶ್ವರರಾದರು ಎಂದು ಜೆಎಸ್‌ಎಸ್ ಕಾಲೇಜಿನ ಸಹಪ್ರಾಧ್ಯಾಪಕ ಡಾ.ನಂದೀಶ್ ಹಂಚೆ ಅಭಿಪ್ರಾಯಪಟ್ಟರು.
ಸೋಮವಾರ ಬಸವ ಸಮಿತಿ ವತಿಯಿಂದ ಜೆಪಿ ನಗರದ ಜೆಎಸ್‌ಎಸ್ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ೧೨ನೇ ಶತಮಾನದಲ್ಲಿ ಬಸವಣ್ಣ ತಮ್ಮ ಉತ್ಕೃಷ್ಟ ವಚನಗಳ ಮೂಲಕ ಸಮಾಜ ಪರಿವರ್ತನೆಗೆ ಮುಂದಾದರು. ಅಸ್ಪಶ್ಯತೆ, ಅಸಮಾನತೆ, ಅಂಧಕಾರವೇ ತುಂಬಿದ್ದ ಕಾಲಘಟ್ಟದಲ್ಲಿ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಜಾತಿ ಪದ್ಧತಿಯನ್ನು ಕಿತ್ತೊಗೆಯಲು ಪ್ರಯತ್ನಿಸಿದರು. ಚಿಕ್ಕ ವಯಸ್ಸಿಗೆ ಅಪಾರ ಸಾಧನೆಗೈದು ವರ್ಣ ಪದ್ಧತಿ ನಿರ್ಮಾಣ ಮಾಡಲು ಹೋರಾಡಿದರು. ಅವರ ಒಂದೊಂದು ತತ್ವಸಿದ್ದಾಂತಗಳು ಎಂದೆಂದಿಗೂ ಪ್ರಸ್ತುತವಾಗಿದ್ದು, ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆದರೆ ಸಮಾಜ ಪರಿವರ್ತನೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತೋಂಟದಾರ್ಯ ಸ್ವಾಮೀಜಿ, ಬಸವ ಸಮಿತಿ ಅಧ್ಯಕ್ಷ ಬ್ಯಾಂಕ್ ಶಿವಕುಮಾರ್.ಎಸ್, ಐಶ್ವರ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: