ದೇಶಪ್ರಮುಖ ಸುದ್ದಿಮೈಸೂರು

ಸೆಪ್ಟೆಂಬರ್ 2ರಂದು ಅಖಿಲ ಭಾರತ ಬಂದ್ ವಿವಿಧ ಕಾರ್ಮಿಕ ಒಕ್ಕೂಟಗಳ ಬೆಂಬಲ

ಆಶಾ ಕಾರ್ಯಕರ್ತೆಯರ ಬೆಂಬಲ:  ವಿವಿಧ ಬೇಡಿಕೆಗಳ ಈಡೇರಿಕೆಗೆ  ಆಗ್ರಹಿಸಿ ವಿವಿಧ ಕಾರ್ಮಿಕ  ಒಕ್ಕೂಟಗಳು  ಸೆಪ್ಟೆಂಬರ್ 2ರಂದು ಕರೆ ನೀಡಿರುವ ‘ಅಖಿಲ ಭಾರತ ಸಾರ್ವತ್ರಿಕ ಮುಷ್ಕರ’ಕ್ಕೆ  ಕರ್ನಾಟಕ ರಾಜ್ಯ ಸಂಯುಕ್ತ  ಆಶಾ ಕಾರ್ಯಕರ್ತೆಯರ ಸಂಘ ಬೆಂಬಲ ಸೂಚಿಸಿದೆ.

ಬೇಡಿಕೆಗಳು: ನಾಗಾಲೋಟದಲ್ಲಿ ಸಾಗಿರುವ ಅವಶ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಗಟ್ಟಬೇಕು. ಕಾರ್ಮಿಕ ಪದ್ದತಿಯನ್ನು ರದ್ದುಗೊಳಿಸಿ ಕನಿಷ್ಠ 18 ಸಾವಿರ ರೂ.ಗಳ ವೇತನ ನೀಡಬೇಕು. ನಿವೃತ್ತರಿಗೆ ಕನಿಷ್ಠ 3 ಸಾವಿರ ರೂಗಳ ಪಿಂಚಣಿ, ವೈದ್ಯಕೀಯ ಸೌಲಭ್ಯಕ್ಕೆ ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪನೆ, ಆಶಾ ಕಾರ್ಯಕರ್ತೆಯರನ್ನು ಇಪಿಎಫ್-ಇಎಸ್ಐ ವ್ಯಾಪ್ತಿಗೆ ಒಳಪಡಿಸಿ ಕಾಯ್ದೆ ತಿದ್ದುಪಡಿ  ಸೇರಿದಂತೆ ಹಲವಾರು ಬೇಡಿಕೆಗಳನ್ನು ಕೇಂದ್ರ ಸರ್ಕಾರವು ಪುರಸ್ಕರಿಸಬೇಕೆಂದು ಆಗ್ರಹಿಸಿ ಬಂದ್‍ಗೆ ಬೆಂಬಲ ಸೂಚಿಸಿದ್ದಾರೆ.

ಸಿ.ಪಿ.ಐ.(ಎಂ)ನಿಂದ ಬಂದ್‍ಗೆ ಬೆಂಬಲ:  ಬಿಜೆಪಿ ನೇತೃತ್ವದ ಎನ್.ಡಿ.ಎ. ಸರ್ಕಾರವು ಕಾರ್ಮಿಕ ವಿರೋಧಿ ನೀತಿ ಅನುಸರಿಸಿ ಬೃಹತ್ ಉದ್ದಿಮೆಗಳಿಗೆ ಮಣೆ ಹಾಕುತ್ತಿದ್ದು ಇದರಿಂದ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಸಾರ್ವಜನಿಕ ರಂಗದಲ್ಲಿ ಉದ್ಯೋಗ ಪ್ರಗತಿಯಲ್ಲಿ ಕುಂಠಿತವಾಗಿದೆ. ಕೇಂದ್ರ ಸರ್ಕಾರವು ಎಲ್ಲ ರಂಗಗಳಲ್ಲೂ ಗುತ್ತಿಗೆ ಹಾಗೂ ಹೊರ ಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ಜಾರಿಗೊಳಿಸಲು ಮುಂದಾಗಿದ್ದು ಇದರಿಂದ ಕಾರ್ಮಿಕರು ಉದ್ಯೋಗ ಭದ್ರತೆಯಿಲ್ಲದೆ ಅತಂತ್ರ ಸ್ಥಿತಿ ಎದುರಾಗುವುದು. ಬ್ಯಾಂಕ್, ವಿಮೆ, ರಕ್ಷಣೆ, ಔಷಧಿ ಕ್ಷೇತ್ರಗಳಲ್ಲಿ  ವಿದೇಶಿ ನೇರ ಬಂಡವಾಳ ಹೂಡುವುದನ್ನು, ಅಸಮರ್ಪಕ ಕೃಷಿ ನೀತಿ, ವೈಜ್ಞಾನಿಕವಲ್ಲದ ಹೊಸ ಶಿಕ್ಷಣ ಪದ್ಧತಿಯನ್ನು ಸಂಘಟನೆಯು ಖಂಡಿಸಿದೆ.

ಬಂದ್ ಗೆ ಬೆಂಬಲ: ಸೆಪ್ಟೆಂಬರ್ 2ರಂದು ನಡೆಯುತ್ತಿರುವ  ಅಖಿಲ ಭಾರತ ಬಂದ್ ಗೆ ಸ್ಥಳೀಯ ಮೈಸೂರು ಜಿಲ್ಲಾ ಪ್ರವಾಸಿ ವಾಹನ ಚಾಲಕರ ಮತ್ತು ಮಾಲೀಕರ ಯೋಗಕ್ಷೇಮಾಭಿವೃದ್ಧಿ ಸಂಘ ಬೆಂಬಲ ವ್ಯಕ್ತಪಡಿಸಿದೆ.

Leave a Reply

comments

Related Articles

error: