ಮೈಸೂರು

ಅರಮನೆಗೆ ಉತ್ಸವ ಮೂರ್ತಿಯ ಆಗಮನ: ಶೃಂಗಾರಗೊಳ್ಳುತ್ತಿದ್ದಾನೆ ಅರ್ಜುನ

ಮೈಸೂರು ದಸರಾ ಉತ್ಸವದಲ್ಲಿ ಅಂಬಾರಿಯಲ್ಲಿ ಕುಳಿತು ವಿಜೃಂಭಿಸಲಿರುವ ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಚಾಮುಂಡಿ ಬೆಟ್ಟದಿಂದ ಅರಮನೆಗೆ ತರಲಾಗಿದೆ. ರೇಣುಕಾದೇವಿ ದೇವಳದಲ್ಲಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ.

ಮೈಸೂರು ದಸರಾ ಉತ್ಸವದ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಅಂಬಾರಿ ಹೊರಲಿರುವ ಆನೆ ಅರ್ಜುನನಿಗೆ ಭರದಿಂದ ಶೃಂಗರಿಸಲಾಗುತ್ತಿದೆ.

ಅರ್ಜುನ ವಿವಿಧ ಬಣ್ಣಗಳ ಚಿತ್ತಾರಗಳಿಂದ ಸಿಂಗಾರಗೊಳ್ಳುತ್ತಿದ್ದಾನೆ. ನಾಗಲಿಂಗಪ್ಪ ಎಂಬವರು ಆನೆಗೆ ಚಿತ್ರ ಬರೆಯುತ್ತಿದ್ದು, ಗಂಡಭೇರುಂಡ, ಪುಷ್ಪಗಳು, ಶಂಖ ಚಿತ್ರಗಳನ್ನು ಆನೆಯ ಮೇಲೆ ಚಿತ್ರಿಸುತ್ತಿದ್ದಾರೆ.

ಅರ್ಜುನನಿಗೆ ಸಿಂಗಾರ ಮಾಡುತ್ತಿರುವಾಗ ಅದರ ಸಾರಥಿ ಸಣ್ಣಪ್ಪ ಪಕ್ಕದಲ್ಲೇ ಇರುವುದು ಕಂಡು ಬಂತು.

arjuna-2

Leave a Reply

comments

Related Articles

error: