ಮೈಸೂರು

ಮಹಡಿ ಮೇಲಿಂದ ಹಾರಿದ ಪ್ರಕರಣಕ್ಕೆ ಮಹತ್ವದ ತಿರುವು

ಮೈಸೂರು,ಜೂ.26:- ಮೈಸೂರಿನ ಕೆ.ಆರ್.ಆಸ್ಪತ್ರೆಯ ಮೇಲಿನ ಮಹಡಿಯಿಂದ ವ್ಯಕ್ತಿಯೋರ್ವರು ಕೆಳಗೆ ಹಾರಿದ ಪ್ರಕರಣಕ್ಕೆ ಮಹತ್ವದ ತಿರುವು ದೊರಕಿದೆ.

ಜಯದೇವ ಮಹಡಿಯ ಬಳಿಯಿಂದ ಕೆಳಗೆ ಹಾರಿದ ಯುವಕನನ್ನು ಮಂಜುನಾಥ್ ಎಂದು ಹೇಳಲಾಗಿದ್ದು, ಈತ ಮೈಸೂರು ಮೂಲದವಳೇ ಆದ ಹುಡುಗಿಯೋರ್ವಳನ್ನು  ಕಳೆದ ಐದನೈದು ವರ್ಷಗಳಿಂದ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಇವರಿಬ್ಬರು ಮೈಸೂರಿನ ಉದಗಿರಿಯ ನಿವಾಸಿಗಳೆಂದು ಹೇಳಲಾಗುತ್ತಿದ್ದು, ಸಂಗೀತಾ ಹೆಚ್ ಐ ವಿ ಪೀಡಿತೆ ಎನ್ನಲಾಗಿದೆ. ಹೀಗಾಗಿ ಆಕೆ ಕೆ ಆರ್ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದಳಂತೆ. ಇವಳಿಗೆ ಚಿಕಿತ್ಸೆ ಕೊಡಿಸುವುದರ ಜೊತೆಗೆ ಪ್ರತಿನಿತ್ಯ ಹಣ್ಣು ಹಂಪಲು ನೀಡಿ ಮಂಜುನಾಥ್ ನೋಡಿಕೊಳ್ಳುತ್ತಿದ್ದ. ಆದರೆ ಕಳೆದ ರಾತ್ರಿ ಸಂಗೀತಳ ಪರಿಸ್ಥಿತಿ ನೋಡಿ ಈತ ಲೈವ್ ಸೂಸೈಡ್ ಪ್ರಯತ್ನ ಮಾಡಿದ್ದಾನೆ. ಈತ ಕೂಡ ಮೂರ್ಛೆ ರೋಗಗ್ರಸ್ಥನಾಗಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.  ಮಂಜುನಾಥ್ ಇದೀಗ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನಿಗೆ ಪ್ರಜ್ಞೆ ಬಂದ ಮೇಲೆಯೇ ಖಚಿತ ಮಾಹಿತಿ ತಿಳಿದು ಬರಲಿದೆ.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: