ಮೈಸೂರು

ಸಹಿ ಸಂಗ್ರಹ ಅಭಿಯಾನ

ಮೈಸೂರು,ಜೂ.26:-ಸ್ವಾತಂತ್ರೋತ್ತರ ಭಾರತದಲ್ಲಿ ಸಂವಿಧಾನದ ಆಶಯಕ್ಕೆ ಪೂರಕವಾಗಿ ದಿ.ರಾಜೀವ್ ಗಾಂಧಿಯವರು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಪ್ರಾತಿನಿಧಿತ್ವವ ಕಲ್ಪಿಸಿದರು. ಅಂತೆಯೇ ಶಾಸನ ಸಭೆ ಮತ್ತು ಲೋಕಸಭೆಗಳಲ್ಲೂ ಮಹಿಳಾ ಪ್ರಾತಿನಿಧ್ಯ ದೊರಕಿಸಬೇಕೆಂಬ ಮಹದಾಸೆ ಅವರದ್ದಾಗಿತ್ತು ಆದರೆ ಸಾಧ್ಯವಾಗಿರಲಿಲ್ಲ. ಅವರು ಕಾಲವಾದ ನಂತರ ಮಹಿಳಾ ಪ್ರಾತಿನಿಧಿತ್ವವ ಬಗೆಗೆ ಯಾರೂ ಕೂಡ ಕಿಂಚಿತ್ತೂ ಕಾಳಜಿ ವಹಿಸಲಿಲ್ಲ.ಕಾಂಗ್ರೆಸ್ ಪಕ್ಷದ ನಾಯಕಿಯಾದ  ಸೋನಿಯಾ ಗಾಂಧಿ ಯವರು ಮಹಿಳಾ ಪರವಾಗಿ ಚಿಂತಿಸಿ  ದೇಶದ ಮಹಿಳೆಯರ ಹಕ್ಕೊತ್ತಾಯಕ್ಕಾಗಿ ದೇಶದಾದ್ಯಂತ ಸಹಿ ಸಂಗ್ರಹ ನಡೆಸಲು ಆದೇಶಿಸಿದ್ದಾರೆ. ಆ ಮೂಲಕ ಮಹಿಳಾ ಮೀಸಲಾತಿಯನ್ನು ಕಲ್ಪಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಮಹಿಳಾ ಘಟಕವು  ಮುಖ್ಯಮಂತ್ರಿಗಳು ಮತ್ತು ಉಸ್ತುವಾರಿ ಸಚಿವರ ಶಾಸಕರ ಮೂಲಕ ಸಹಿಸಂಗ್ರಹದ ಅಭಿಯಾನವನ್ನು ನಡೆಸಲು ತೀರ್ಮಾನಿಸಿದ್ದು, ಸಹಿ ಸಂಗ್ರಹ ಅಭಿಯಾಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಪುಷ್ಪಾ ಅಮರನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: