ಮೈಸೂರು

ಕಲಾಮಂದಿರದಲ್ಲಿ ಗೋ ಮಾಂಸ ಸೇವಿಸಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವುದು ಖಂಡನೀಯ : ತೇಜೇಶ್ ಲೋಕೇಶ್ ಗೌಡ

ಮೈಸೂರು,ಜೂ.26:- ಕಲಾಮಂದಿರದ ಮನೆಯಂಗಳದಲ್ಲಿ ಭಾನುವಾರ ಗೋಮಾಂಸ ಸೇವಿಸಿದ ಕೆಲವು ಪ್ರಗತಿಪರರ ವರ್ತನೆ ನಿಜಕ್ಕೂ ಖಂಡನೀಯ, ಇವರುಗಳು ಸಮಾಜದ ಕಳಂಕ, ಇವರೆಲ್ಲರೂ ಮೊನ್ನೆ ಒಂದೆಡೆ ಸೇರಿಕೊಂಡು ದೈತ್ಯ ರಾಕ್ಷಸರಂತೆ ಗೋಮಾಂಸ ಸೇವಿಸಿ ನಮ್ಮ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ. ಕೀಳು ಮಟ್ಟದ ಪ್ರಚಾರಕ್ಕಾಗಿ ಇಂತಹ ಕೃತ್ಯಕ್ಕಿಳಿದಿರುವ ಈ ಪ್ರಗತಿಪರ ಕೃತ್ಯ ಖಂಡನೀಯ ಎಂದು ಕರ್ನಾಟಕ ಸೇನಾ ಪಡೆ ಜಿಲ್ಲಾಧಕ್ಷ ತೇಜೇಶ್ ಲೋಕೇಶ್ ಗೌಡ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು ನಮ್ಮ ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಗೋವುಗಳನ್ನು ಪೂಜನೀಯ ಸ್ಥಾನದಲ್ಲಿರಿಸಿದೆ, ಅಂತಹ ಗೋವನ್ನು ಅದರಲ್ಲೂ ಸರ್ಕಾರಿ ದೇಗುಲ ಕಲಾಮಂದಿರ ಸಭಾಂಗಣದಲ್ಲಿ, ಗೋಮಾಂಸ ಸೇವನೆ ನಿಷೇಧವಿದ್ದರೂ, ಆ ಕೆಲಸ ಮಾಡಿ ನಮ್ಮ ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ. ಈ ಪ್ರಗತಿಪರರುಗಳು ಹಿಂದೂಗಳಾಗಿ ನಮ್ಮ ಧರ್ಮದ ಮೇಲೆ ಈ ರೀತಿ ಬೇಲಿಯೇ ಎದ್ದು ಹೊಲ ಮೇಯುವಂತ ಕೆಲಸ ಮಾಡುತ್ತಿರುವುದು ಅತ್ಯಂತ ಶೋಚನೀಯ ಸಂಗತಿ. ಈ ಘಟನೆಗೆ ಕಾರಣರಾದವರ ಮೇಲೆ ಕಾನೂನು ಉಲ್ಲಂಘನೆ ಮಾಡಿರುವ  ಈ ಸಂಘಟನೆ ಹಾಗೂ ಪ್ರಗತಿಪರರ ಮೇಲೆ ಸರ್ಕಾರ ಕಾನೂನು ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಕೂಡಲೇ ಸರ್ಕಾರ ಈ ಪ್ರಗತಿಪರರ ಹೆಸರನ್ನು  ಕಪ್ಪು ಪಟ್ಟಿಗೆ ಸೇರಿಸಿ ಇನ್ನು ಮುಂದೆ ಇವರು ಯಾವುದೇ ಸಭೆ ಸಮಾರಂಭಗಳಲ್ಲಿ ಭಾಗವಹಿಸದಂತೆ ನಿಷೇದಾಜ್ಞೆ ಹೊರಡಿಸಬೇಕು ಎಂದಿದ್ದಾರೆ. (ಎಸ್.ಎಚ್)

Leave a Reply

comments

Related Articles

error: