ದೇಶಪ್ರಮುಖ ಸುದ್ದಿ

ಪತ್ರಕರ್ತರಿಗೆ ಕರ್ನಾಟಕ ವಿಧಾನಮಂಡಲದಿಂದ ಶಿಕ್ಷೆ : ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ತೀವ್ರ ವಿರೋಧ

ಬೆಂಗಳೂರು, ಜೂನ್ 26 : ಶಾಸಕರ ವಿರುದ್ಧ ಮಾನಹಾನಿ ಆಗುವಂಥ ವರದಿ ಮಾಡಿದ ಆರೋಪದ ಮೇಲೆ ಕರ್ನಾಟಕ ವಿಧಾನ ಮಂಡಲವು ಪತ್ರಕರ್ತರಿಗೆ ಜೈಲುಶಿಕ್ಷೆ ವಿಧಿಸಿರುವುದರ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.

ಪತ್ರಕರ್ತರ ವಿರುದ್ಧ ಇಂಥ ಕ್ರಮಕ್ಕೆ ಎಡಿಟರ್ಸ್ ಗಿಲ್ಡ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇದರ ಜೊತೆಗೇ ಎಐಸಿಸಿ ವಕ್ತಾರ ಮತ್ತು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಅವರು ಇಂತಹ ಆತುರದ ಕ್ರಮ ಸರಿಯಲ್ಲ. ಸಮಿತಿಯು ಪತ್ರಕರ್ತರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿರುವುದು ತಪ್ಪು. ಕರ್ನಾಟಕ ವಿಧಾನಮಂಡಲವು ಈ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು ಎಂದಿದ್ದಾರೆ. ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದಿಂದ ಪ್ರಬಲ ಆಕ್ಷೇಪ ಬಂದ ನಂತರ ಕಾಂಗ್ರೆಸ್ಸಿಗರೇ ಆದ ಶಾಸಕ ದಿನೇಶ್ ಗುಂಡೂರಾವ್ ಅವರು ವಿಧಾನಮಂಡಲದ ನಿರ್ಧಾರ ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜೂನ್ 22ರಂದು ವಿಧಾನಸಭೆ ಅಧ್ಯಕ್ಷ ಕೆ.ಬಿ.ಕೋಳಿವಾಡ ಅವರು, ಪತ್ರಕರ್ತರಾದ ರವಿ ಬೆಳಗೆರೆ ಹಾಗೂ ಅನಿಲ್ ರಾಜ್ ಎಂಬುವರಿಗೆ ಒಂದು ವರ್ಷ ಜೈಲು ಹಾಗೂ ಹತ್ತು ಸಾವಿರ ದಂಡ ವಿಧಿಸಿದ್ದರು. ಶಾಸಕರು ನೀಡಿದ್ದ ದೂರಿನ ಅನ್ವಯ ಹಕ್ಕು ಬಾಧ್ಯತಾ ಸಮಿತಿ ಈ ಶಿಕ್ಷೆಗೆ ಶಿಫಾರಸು ಮಾಡಿತ್ತು.

ಆದರೆ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ, ಯಾವುದೇ ಪತ್ರಕರ್ತರಿಗೆ ಮಾನಹಾನಿ ಪ್ರಕರಣದಲ್ಲಿ ಶಿಕ್ಷೆ ವಿಧಿಸುವುದು ಕೋರ್ಟ್‍ಗೆ ಬಿಟ್ಟಿದ್ದು. ಕರ್ನಾಟಕ ವಿಧಾನಮಂಡಲ ಅದಕ್ಕಿರುವ ವಿಶೇಷ ಹಕ್ಕನ್ನು ಮತ್ತು ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳಬಾರದು ಎಂದು ಹೇಳಿದೆ.

-ಎನ್.ಬಿ.

Leave a Reply

comments

Related Articles

error: