ದೇಶ

ಜಯಲಲಿತಾ ಅವರ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಇಬ್ಬರ ಬಂಧನ

ಚೆನ್ನೈ: ಸಾಮಾಜಿಕ ಜಾಲತಾಣದಲ್ಲಿ ತಮಿಳುನಾಡು ಸಿಎಂ ಜಯಲಲಿತಾ ಅವರ ಸಾವಿನ ವದಂತಿ ಹಬ್ಬಿಸಿದ ಇಬ್ಬರನ್ನು ಚೆನ್ನೈ ನಗರ ಪೊಲೀಸರು ಬಂಧಿಸಿದ್ದಾರೆ. ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಸತೀಶ್ ಕುಮಾರ್(26) ಮತ್ತು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ಮಾದಸ್ವಾಮಿ(25) ಬಂಧಿತರು. ಎಐಎಡಿಎಂಕೆ ಐಟಿ ಕಾರ್ಯದರ್ಶಿ ಕೆ.ಆರ್. ರಾಮಚಂದ್ರನ್ ಅವರು ನೀಡಿದ ದೂರಿನ ಮೇರೆಗೆ ಇವರನ್ನು ಬಂಧಿಸಲಾಗಿದೆ.

ಇವರಿಬ್ಬರು ಜಯಲಲಿತಾ ಅವರ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ಅವರ ಅಭಿಮಾನಿಗಳಿಗೆ ಆಘಾತ ಉಂಟು ಮಾಡಿದ್ದರು. ವೆಬ್‍ಸೈಟ್‍ವೊಂದರಲ್ಲಿ ಚೆನ್ನೈ ಅಪೋಲೊ ಆಸ್ಪತ್ರೆಯ ಸಿಬ್ಬಂದಿಯ ಧ್ವನಿ ಎಂದು ಆಡಿಯೋವೊಂದನ್ನು ಹಾಕಿ ವದಂತಿ ಹಬ್ಬಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಜಯಲಲಿತಾ ಅವರು ಆಸ್ಪತ್ರೆಗೆ ದಾಖಲಾದ ಬಳಿಕ ಹಲವಾರು ವದಂತಿಗಳು ಹಬ್ಬಲು ಶುರುವಾಗಿತ್ತು. ಎಐಎಡಿಎಂಕೆ ಪಕ್ಷದವರಾಗಲಿ ಅಥವಾ ಆಸ್ಪತ್ರೆ ವೈದ್ಯರಾಗಲಿ ಜಯಲಲಿತಾ ಅವರ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ನೀಡದಿರುವುದು ಈ ವದಂತಿಗೆ ಇನ್ನಷ್ಟು ಪುಷ್ಠಿ ನೀಡಿತ್ತು.

ಜಯಾಲಲಿತಾ ಸಹಿ ಫೋರ್ಜರಿ?: ಆಸ್ಪತ್ರೆಗೆ ದಾಖಲಾಗಿರುವ ಸಿಎಂ ಜಯಲಲಿತಾ ಅವರ ಸಹಿಯನ್ನು ಫೋರ್ಜರಿ ಮಾಡುವ ಸಾಧ್ಯತೆಯಿದೆ ಎಂದು ಎಐಎಡಿಎಂಕೆ ಉಚ್ಛಾಟಿತ ರಾಜ್ಯಸಭೆ ಸದಸ್ಯೆ ಶಶಿಕಲಾ ರಾಜ್ಯಪಾಲ ಸಿ. ವಿದ್ಯಾಸಾಗರ್ ಅವರಿಗೆ ಪತ್ರ ಬರೆದಿದ್ದಾರೆ. ಪ್ರಧಾನ ಉಪ ಕಾರ್ಯದರ್ಶಿ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯಲು ಮುಖ್ಯಮಂತ್ರಿಯ ಸುತ್ತ ಇರುವವರು ಅವರ ಸಹಿಯನ್ನು ನಕಲಿ ಮಾಡುವ ಸಾಧ್ಯತೆಯಿದೆ. ಹಾಗಾಗಿ ಆಸ್ಪತ್ರೆಗೆ ದಾಖಲಾಗುವುದಕ್ಕಿಂತ ಮೊದಲು ಮತ್ತು ಆಮೇಲಿನ ಸಹಿಗಳನ್ನು ಪರಿಶೀಲಿಸನಬೇಕೆಂದು ಶಶಿಕಲಾ ಮನವಿ ಮಾಡಿದ್ದಾರೆ.

Leave a Reply

comments

Related Articles

error: