ಮೈಸೂರು

ಅರಮನೆಯ ಸುತ್ತ ಪೊಲೀಸ್ ಸರ್ಪಗಾವಲು

ಐತಿಹಾಸಿಕ ದಸರಾ ಉತ್ಸವದ ಮೆರವಣಿಗೆ ಹೊರಡಲು ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ಅರಮನೆಯ ಸುತ್ತಲೂ ಪೊಲೀಸ್ ಸರ್ಪಗಾವಲನ್ನು ಹಾಕಲಾಗಿದೆ. ಅಕ್ಟೋಬರ್ 1ರಂದು ಆರಂಭವಾಗಿರುವ ಹನ್ನೊಂದು ದಿನಗಳ ನಾಡಹಬ್ಬಕ್ಕೆ ಜಂಬೂ ಸವಾರಿಯ ಮೆರವಣಿಗೆಯೊಂದಿಗೆ ವಿದ್ಯುಕ್ತವಾಗಿ ಮಂಗಳವಾರ ಸಂಜೆ ತೆರೆ ಬೀಳಲಿದೆ.

ದಸರಾ ಉತ್ಸವ ಮೆರವಣಿಗೆಯು ಅರಮನೆ ಆವರಣದಿಂದ ಮಧ್ಯಾಹ್ನದ ಬಳಿಕ ಹೊರಡಲಿದ್ದು, ಮೆರವಣಿಗೆ ಹೊರಡುವುದನ್ನು ಕಣ್ತುಂಬಿಸಿಕೊಳ್ಳಲು ಆಗಮಿಸುವ ವೀಕ್ಷಕರಿಗೆ ಈಗಾಗಲೇ ಆಸನ ವ್ಯವಸ್ಥೆಗಳನ್ನು ಮಾಡಲಾಗಿದೆ.

ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಅರಮನೆಯ ಸುತ್ತ ಪೊಲೀಸರು ಹದ್ದಿನ ಕಣ್ಣಿರಿಸಿ ಕಾವಲು ಕಾಯುತ್ತಿದ್ದಾರೆ.

ಪೊಲೀಸರು ಅರಮನೆಗೆ ಆಗಮಿಸುತ್ತಿರುವ ಎಲ್ಲರನ್ನೂ ಸುರಕ್ಷತೆಯ ದೃಷ್ಟಿಯಿಂದ ವಿಚಾರಿಸಿ ಆವರಣದ ಒಳಗೆ ಪ್ರವೇಶಕ್ಕೆ ಅನುವು ಮಾಡಿಕೊಡುತ್ತಿದ್ದಾರೆ.

Leave a Reply

comments

Related Articles

error: