ಪ್ರಮುಖ ಸುದ್ದಿ

ತಂದೆಯಿಂದಲೇ ಮಗನ ಹತ್ಯೆ

ಪ್ರಮುಖ ಸುದ್ದಿ, ಕಾರವಾರ, ಜೂ.26: ಮನೆಗೆ ಹಣ ನೀಡುತ್ತಿಲ್ಲವೆಂದು ತಂದೆಯೇ ಮಗನನ್ನು ಕೊಲೆ ಮಾಡಿರುವ ಘಟನೆ ಅಂಕೋಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹಾರವಾಡ ಗ್ರಾಮದ ವಿನೋದ ಪಾಂಡುರಂಗ ಹರಿಕಂದ್ರ(20) ಕೊಲೆಯಾದ ಮಗ. ಸಿಬರ್ಡ್ ಕಾಲೋನಿಯ ನಿವಾಸಿಯಾದ ಪಾಂಡುರಂಗ ನಾರಾಯಣ ಹರಿಕಂದ್ರ ತನ್ನ ಮಗನ ತಲೆ ಮೇಲೆ ರುಬ್ಬುವ ಗುಂಡು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಮಗ ದುಡಿದ ಹಣವನ್ನು ಮನೆಗೆ ನೀಡುತ್ತಿಲ್ಲ ಎಂದು ಪಾಂಡುರಂಗ ನಾರಾಯಣ ಕೊಲೆ ವಿನೋದನನ್ನು ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಅಂಕೋಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. (ವರದಿ ಬಿ.ಎಂ)

Leave a Reply

comments

Related Articles

error: