ಮೈಸೂರುಸುದ್ದಿ ಸಂಕ್ಷಿಪ್ತ

ಮೊದಲ ಶ್ರೇಣಿಯಲ್ಲಿ ನರಸಿಹರಾಜ ಸ್ಟೇಷನ್

ಮೈಸೂರು,ಜೂನ್‍.27:   ಕಮಿಷನರ್‍ ವ್ಯಾಪ್ತಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ನರಸಿಂಹರಾಜ ಠಾಣೆ ಮೊದಲ ಶ್ರೇಣಿಯಲ್ಲಿದೆ.

ರಾಜಸ್ಥಾನ ಪೊಲೀಸ್‍ ಮಾದರಿಯಲ್ಲಿ ಠಾಣೆಗಳಿಗೂ ಇದೇ ಮೊದಲನೆ ಬಾರಿಗೆ ಶ್ರೇಣಿ ವ್ಯವಸ್ಥೆಯನ್ನು ನೀಡಲಾಗುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆ ಮತ್ತು ಸಂಚಾರಿ ಠಾಣೆಗಳಲ್ಲಿ ಉತ್ತಮ ಶ್ರೇಣಿಯಲ್ಲಿ 5 ಠಾಣೆಗಳಿವೆ.  ನರಸಿಂಹರಾಜ, ಸರಸ್ವತಿ ಪುರಂ, ಮಂಡಿ ಮೊಹಲ್ಲಾ, ವಿ.ವಿ.ಪುರಂ, ಕೃಷ್ಣರಾಜ ಠಾಣೆಗಳು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದರಲ್ಲಿ ಉತ್ತಮ ಶ್ರೇಣಿಯಲ್ಲಿದ್ದು,  ಸಂಚಾರ ಠಾಣೆಗಳಾದ ನರಸಿಂಹರಾಜ, ದೇವರಾಜ, ಕೃಷ್ಣರಾಜ, ವಿ.ವಿ,ಪುರಂ ಮತ್ತು ಸಿದ್ಧಾಥ‍ ಠಾಣೆಗಳಿವೆ.ಅಪರಾಧ, ಅಪಘಾತ ನಡೆಯದಂತೆ ತಡೆಯುವುದು, ಪ್ರಕರಣ ವಿಲೇವಾರಿ, ದೋಷಾರೋಪ ಪಟ್ಟಿ ಸಲ್ಲಿಕೆ ಹಾಗೂ ಸಾರ್ವಜನಿಕ ಸಭೆ ನಡೆಸಿದ ಆಧಾರದ ಮೇರೆಗೆ ಶ್ರೇಣಿಯನ್ನು ನೀಲಾಗಿದೆ. ರಾಜ್ಯ ಪೊಲೀಸ್‍ ಮಹಾ ನಿರ್ದೇಶಕ ಆರ್‍.ಕೆ. ದತ್ತಾ ಸೂಚನೆ ಮೇರೆಗೆ ಈ ಸಮೀಕ್ಷೆ ನಡೆಯಿತು.(ಪಿ.ಜೆ)

 

Leave a Reply

comments

Related Articles

error: