ಕರ್ನಾಟಕ

ಉಡುಪಿ ಮಠದಲ್ಲಿ ಇಫ್ತಾರ್ ಕೂಟ: ಜು.2 ರಂದು ರಾಜ್ಯಾದ್ಯಾಂತ ಪ್ರತಿಭಟನೆ

ಉಡುಪಿ,ಜೂ.27-ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ನಡೆಸಲು ಅವಕಾಶ ನೀಡಿರುವುದನ್ನು ಖಂಡಿಸಿ ಜುಲೈ 2 ರಂದು ಶ್ರೀ ರಾಮ ಸೇನೆ ವತಿಯಿಂದ ರಾಜ್ಯಾದ್ಯಾಂತ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಮಠಕ್ಕೆ ಗೋ ಮಾಂಸ ಭಕ್ಷಕರಿಗೆ ಪ್ರವೇಶ ನೀಡಿ ನಮಾಝ್ ಗೆ ಅವಕಾಶ ನೀಡಿರುವುದು ಸರಿಯಲ್ಲ. ಆ ಮೂಲಕ ಸ್ವಾಮೀಜಿ ಸಮಾಜಕ್ಕೆ ತಪ್ಪು ಸಂದೇಶ ನೀಡಿದ್ದಾರೆ. ಇದು ಇಡೀ ಹಿಂದೂ ಸಮಾಜಕ್ಕೆ ಮಾಡಿರುವ ಅವಮಾನವಾಗಿದೆ ಎಂದು ಅವರು ಕಿಡಿಕಾರಿದ್ದಾರೆ. (ವರದಿ-ಎಸ್.ಎನ್, ಎಂ.ಎನ್)

 

Leave a Reply

comments

Related Articles

error: