ಮೈಸೂರು

ಚಿಕ್ಕಣ್ಣ ಹಗಿನವಾಳು ಅವರ ಮಾಸ ಪತ್ರಿಕೆ ಬಿಡುಗಡೆ

ಮೈಸೂರು, ಜೂ.27:  ಮೈಸೂರಿನ ಇನ್ಸ್ಟಿಟ್ಯೂಟ್ ಆಫ್  ಇಂಜಿನಿಯರಿಂಗ್ ಸಭಾಂಗಣದಲ್ಲಿ ಚಿಕ್ಕಣ್ಣ ಹಗಿನವಾಳು ಅವರ ‘ವಿಮೋಚನೆಗೆ ಅಂಬೇಡ್ಕರ್ ಕೊಡುಗೆ ಹಾಗೂ ಪರಿಕಲ್ಪನೆ’ ಎಂಬ ಮಾಸ ಪತ್ರಿಕೆಯ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ , ನಾನು  22 ನೇ ವಯಸ್ಸಿಗೆ ಮೊಟ್ಟ ಮೊದಲು ಕವನ ಬರೆಯುವ ಮುಖಾಂತರ ಲೇಖನವನ್ನು ಬರೆಯಲು ಪ್ರಾರಂಭಿಸಿದೆ. ಅದರೆ ಹಗಿನವಾಳು ಚಿಕ್ಕಣ್ಣ 22 ನೇ ವಯಸ್ಸಿಗೆ ಕೃತಿ ಬರೆಯುವ ಮುಖಾಂತರ ನೇರವಾಗಿ ಲೇಖನ ಬರೆದಿರುವುದು ನಿಜಕ್ಕೂ ಶ್ಲಾಘನೀಯ ಎಂದು ಬಣ್ಣಿಸಿದರು. ರಂಜಾನ್ ಹಬ್ಬದ ಪ್ರಯುಕ್ತ ಉಡುಪಿ ಮಠದ ಪೇಜಾವರ ಶ್ರೀ ಅವರು ಇಫ್ತಾರ್ ಕೂಟ ಏರ್ಪಡಿಸಿ  ಸಮಾನತೆ ಅನ್ನುವ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಮುಂದೆ ಬರುವ ರಾಮನವಮಿ, ಕೃಷ್ಣ ಜನ್ಮಷ್ಟಾಮಿ ದಿನದಂದು ಇಸ್ಲಾಂ ಧರ್ಮದವರು ಪೇಜಾವರ ಶ್ರೀಗಳನ್ನು ಮಸೀದಿಗೆ ಕರೆದು ಪಾನಕ ಹಾಗೂ ಮುಸ್ಲಿಂ ಸಮುದಾಯದವರ ಜೊತೆ ಪಂಕ್ತಿ ಭೋಜನಕ್ಕೆ ಆಹ್ವಾನ ನೀಡುವಂತೆ ಕರೆ ನೀಡಿದರು.

ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಡಾ. ಪುಷ್ಪ ಅಮರನಾಥ್ ಅವರು ಮಾತನಾಡಿ, ಈ ದೇಶಕ್ಕೆ, ಸಂವಿಧಾನಕ್ಕೆ ಅಂಬೇಡ್ಕರ್ ಅವರು ಕೊಟ್ಟ ಕೊಡುಗೆ ಅಪಾರ. ಮಹಿಳೆಯರು ಅಂಬೇಡ್ಕರ್ ಅವರ ಕಾರ್ಯಕ್ರಮಗಳನ್ನು  ಹೆಚ್ಚು ಹೆಚ್ಚು ರೂಪಿಸಿಬೇಕು ಮತ್ತು ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುವಂತಗಾಬೇಕು ರಾಜಕಾರಣಿಗಳು ಬರಿ ಮಹಿಳೆಯರ ಬಗ್ಗೆ ಮಹಿಳಾ ಮೀಸಲಾತಿ ಬಗ್ಗೆ ಮಾತನಾಡುತ್ತಾರೆ ಅಷ್ಟೇ.  ಅವರಿಗೆ ಈಗಲೂ ಉನ್ನತ ಹುದ್ದೆಗಳಲ್ಲಿ ಮೀಸಲಾತಿ ಸಿಕ್ಕಿಲ್ಲ.  ಶೇಕಡಾ 33% ರಷ್ಟು ಮಹಿಳೆಯರಿಗೆ ಮೀಸಲಾತಿ ಅಂತ ಹೇಳುತ್ತಾರೆ. ಅದು ಸ್ಥಳೀಯ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ, ಮಹಾ ನಗರ ಪಾಲಿಕೆಗೆ ಮಾತ್ರ ಸೀಮಿತ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಉನ್ನತ ಹುದ್ದೆಗಳಿಗೆ ಹಿಂದುಳಿದ ಹಾಗೂ ದಲಿತ ಮಹಿಳೆಯರನ್ನು ಇನ್ನೂ ಏಕೆ ಪರಿಗಣಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಭಂಜಗೆರೆ ಜೈ ಪ್ರಕಾಶ್, ನಗರ ಪಾಲಿಕೆ ಸದಸ್ಯ ಪುರುಷೋತ್ತಮ್ , ದಲಿತ ಲೇಖಕ ಹಾಗೂ ದಲಿತರ ಕ್ರಾಂತಿ ಕಿಡಿ  ಹಾರೋಹಳ್ಳಿ ರವೀಂದ್ರ,  ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೂಡು, ಜ್ಞಾನ ಪ್ರಕಾಶ್ ಸ್ವಾಮಿಜಿ ಕಲ್ಯಾಣಗಿರಿ ಬಂತೇಜಿ ಸ್ವಾಮೀಜಿ,  ಸಾಹಿತಿ ಮಲ್ಕುಂಡಿ ಮಹದೇವಸ್ವಾಮಿ, ದಲಿತ ಹೋರಾಟಗಾರ ಶಿವಕುಮಾರ್,  ಚೋರನಹಳ್ಳಿ ಶಿವಣ್ಣ ಇನ್ನೂ ಜನ ಸಂಗ್ರಾಮ ಪರಿಷತ್’ನ ನಗರ್ಲೆ ಎಂ.ವಿಜಯ್ ಕುಮಾರ್ ಮುಂತಾದವರು ಭಾಗವಹಿಸಿದ್ದರು. (ವರದಿ: ಎಸ್.ಎನ್, ಎಲ್.ಜಿ)

 

Leave a Reply

comments

Related Articles

error: