ಕ್ರೀಡೆಪ್ರಮುಖ ಸುದ್ದಿ

ಟೀಂ ಇಂಡಿಯಾಗೆ ಕೋಚ್ ಆಗುವಷ್ಟು ಅನುಭವ ನನಗಿಲ್ಲ: ಜಯವರ್ಧನೆ

ಪ್ರಮುಖ ಸುದ್ದಿ, ಕೊಲಂಬೊ, ಜೂ.27: ಅನಿಲ್ ಕುಂಬ್ಳೆ ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾಗಿರುವ ಸ್ಥಾನಕ್ಕೆ ಶ್ರೀಲಂಕಾದ ಮಾಜಿ ಆಟಗಾರ ಮಹೇಲಾ ಜಯವರ್ಧನೆ ಅರ್ಜಿ ಸಲ್ಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ  ಈ ವಿಷಯವನ್ನು ಸ್ವತಃ ಅವರೇ ತಿರಸ್ಕರಿಸಿದ್ದಾರೆ.

ಈ ಸಂಬಂಧ ಮಾತನಾಡಿರುವ ಅವರು, ಟೀಂ ಇಂಡಿಯಾಗೆ ಕೋಚ್ ಆಗುವಷ್ಟು ಅನುಭವ ನನಗಿಲ್ಲ. ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ ಎಂಬ ವಿಷಯ ಅಚ್ಚರಿ ತಂದಿದ್ದು, ಪೂರ್ಣಾವಧಿ ಹುದ್ದೆಗಳಿಗೆ ನಾನಿನ್ನೂ ಸಿದ್ಧವಾಗಿಲ್ಲ. ಇಂತಹ ಸಂದರ್ಭದಲ್ಲಿ ಟೀಂ ಇಂಡಿಯಾ ಕೋಚ್ ಸ್ಥಾನ ನಿಭಾಯಿವುದು ಹೇಗೆ ತಾನೆ ಸಾಧ್ಯ ಎಂದು ಹೇಳುವ ಮೂಲಕ ಗಾಳಿ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ. (ವರದಿ ಬಿ.ಎಂ)

 

Leave a Reply

comments

Related Articles

error: