ಮೈಸೂರು

ಕೂಲಿಕಾರ್ಮಿಕನ ಮೃತದೇಹ ವರುಣಾ ಕೆರೆಯಲ್ಲಿ ಪತ್ತೆ

ಮೈಸೂರು,ಜೂ.27:-ಕೂಲಿ  ಕಾರ್ಮಿಕನ  ಮೃತ ಶರೀರವೊಂದು ವರುಣಾಕೆರೆಯಲ್ಲಿ ಕಂಡು ಬಂದಿದ್ದು, ಆತನ ಮನೆಯವರು ಕೊಲೆಯೆಂಬ ಶಂಕೆ ವ್ಯಕ್ತಪಡಿಸಿದ್ದಾರೆ.

ಮೃತನನ್ನು ಎನ್.ಆರ್.ಮೊಹಲ್ಲಾ ವೀರನಗೇರಿ ನಿವಾಸಿ ರಮೇಶ್ (36)ಎಂದು ಗುರುತಿಸಲಾಗಿದೆ. ಈತನಿಗೆ ಮದುವೆಯಾಗಿ ಮಗುವಿದ್ದು, ಆಗಾಗ ಮನೆಗೆ ಹೋಗಿ ಬಂದು ಮಾಡುತ್ತಿದ್ದ. ಆದರೆ ಮೊನ್ನೆ ಹೋಗಿರಲಿಲ್ಲ. ಇದರಿಂದ ಗಾಬರಿಗೊಂಡ ಮನೆಯವರು ಸಂಪರ್ಕಿಸಲು ಯತ್ನಿಸಿದರು. ಆದರೆ ಸಂಪರ್ಕ ಸಾಧ್ಯವಾಗಿರಲಿಲ್ಲ. ವರುಣಾಕೆರೆಯಲ್ಲಿ ಮೃತಶರೀರವೊಂದು ಕಂಡು ಬಂದಿತ್ತು. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದರು. ಸ್ಥಳಕ್ಕಾಗಮಿಸಿದ ವರುಣಾ ಪೊಲೀಸರು ರಮೇಶ್ ಎಮದು ಗುರುತಿಸಿ ಮನೆಯವರಿಗೆ ವಿಷಯ ಮುಟ್ಟಿಸಿದ್ದಾರೆ. ಕೆ.ಆರ್.ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಕೊಲೆಯೋ, ಆತ್ಮಹತ್ಯೆಯೋ ಎಂಬುದು ತಿಳಿದುಬರಬೇಕಿದೆ. ವರುಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: