ಪ್ರಮುಖ ಸುದ್ದಿಮೈಸೂರು

ಜಟ್ಟಿ ಕಾಳಗಕ್ಕೆ ಮುನ್ನ ಮಾತಿನ ಚಕಮಕಿ

ಅರಮನೆ ಆವರಣದಲ್ಲಿ ಇನ್ನೇನು ಜಟ್ಟಿ ಕಾಳಗ ಆರಂಭವಾಗಬೇಕಿದೆ ಎನ್ನುವಷ್ಟರಲ್ಲಿ ಪೊಲೀಸರು ಮತ್ತು ಜಟ್ಟಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು ಜಟ್ಟಿಗಳು ಅರಮನೆಯಿಂದ ಹೊರನಡೆದ ಘಟನೆ ಮಂಗಳವಾರ ಸಂಭವಿಸಿದೆ.

ಮಂಗಳವಾರ 10ಗಂಟೆಗೆ ಅರಮನೆ ಆವರಣದಲ್ಲಿ ಜಟ್ಟಿ ಕಾಳಗ ಆರಂಭವಾಗಬೇಕಿತ್ತು. ಜಟ್ಟಿಗಳು ಅರಮನೆ ಅವರಣಕ್ಕೆ ಪ್ರವೇಶಿಸುತ್ತಿದ್ದಂತೆ ಅವರು ಜಟ್ಟಿಗಳೆಂದು ತಿಳಿದಿರದ ಪೊಲೀಸರು ಅವರನ್ನು ತಡೆದು ನಿಲ್ಲಿಸಿದರು ಎನ್ನಲಾಗಿದೆ. ಪೊಲೀಸರು ಜಟ್ಟಿಗಳನ್ನು ತಡೆದು ಅವಮಾನಿಸಿದ್ದಾರೆಂದು ಆರೋಪಿಸಿ ಜಟ್ಟಿಗಳು ಹೊರ ನಡೆದಿದ್ದು ಜಟ್ಟಿಗಳ ಮನವೊಲಿಕೆಗೆ ಪ್ರಯತ್ನ ನಡೆಸಿದ್ದು ಬಳಿಕ ಜಟ್ಟಿಗಳು ಸಂಪ್ರದಾಯ ಮುರಿಯದಿರಲು ನಿರ್ಧರಿಸಿ ವಾಪಸ್ಸಾಗಿದ್ದಾರೆ ಎನ್ನಲಾಗಿದೆ.

ಅವರು ಜಟ್ಟಿಗಳೆಂದು ಪೊಲೀಸರಿಗೆ ತಿಳಿಯದಿರುವುದೇ ಈ ಘಟನೆಗೆ ಕಾರಣ ಎಂದು ತಿಳಿದುಬಂದಿದೆ.

Leave a Reply

comments

Related Articles

error: