ಕರ್ನಾಟಕ

ಸರ್ವ ಧರ್ಮ ಸಮನ್ವಯ ಭಾವನೆಯಲ್ಲಿ ಮಠದಲ್ಲಿ ರಂಜಾನ್ ಆಚರಣೆ: ಡಿ.ವಿ.ಸದಾನಂದಗೌಡ

ಬೆಂಗಳೂರು,ಜೂ.27- ಉಡಪಿಯಲ್ಲಿ ಇಫ್ತಿಯಾರ್ ಕೂಟ ಆಯೋಜನೆ ಮಾಡುವ ಮೂಲಕ ಶ್ರೀಗಳು ಸರ್ವ ಧರ್ಮ ಸಮನ್ವಯ ಭಾವನೆಯಲ್ಲಿ ರಂಜಾನ್ ಆಚರಣೆ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಂಜಾನ್ ಗಾಗಿ ರಾಜಕಾರಣಿಗಳು ಟೋಪಿ ಹಾಕಿ ಫೋಸ್ ಕೊಡುತ್ತಾರೆ. ಆದರೆ ಸ್ವಾಮೀಜಿ ಮಾಡಿದ್ದು, ಶೋ ಅಲ್ಲ. ಅವರು ಫೋಸ್ ಕೊಟ್ಟಿಲ್ಲ. ಮಠದಲ್ಲಿ ನಮಾಜ್ ಮಾಡದೆ ಬೇರೆ ಏನೇ ಮಾಡಿದ್ದರೂ ಅದು ತಪ್ಪಾಗುತ್ತಿತ್ತು. ಶ್ರೀಗಳು ರಂಜಾನ್ ಆಚರಣೆ ಮಾಡಿದ್ದು ತಪ್ಪಲ್ಲ ಎಂದಿದ್ದಾರೆ.

ಇನ್ನೂ ಮೈಸೂರಿನಲ್ಲಿ ಗೋಮಾಂಸ ಭಕ್ಷಣೆ ಬಗ್ಗೆ ಮಾತನಾಡಿದ ಅವರು, ಕೆಲ ಬುದ್ಧಿ ಜೀವಿಗಳಿಗೆ ಬುದ್ಧಿ  ತಲೆಯಲ್ಲಿ ಇರೋಲ್ಲ. ಅವರ ಚೀಲದಲ್ಲಿ ಇರುತ್ತೆ. ಅದನ್ನ ಇಂತಹದ್ದಕ್ಕೆ ಖರ್ಚು ಮಾಡುತ್ತಾರೆ ಎಂದು ಟೀಕಿಸಿದ್ದಾರೆ.

ದೇಶದ ಸಂಸ್ಕೃತಿ , ಸಂಸ್ಕಾರ ಹಿನ್ನಲೆಯಲ್ಲಿ ಸರ್ಕಾರ ಈ ನಿಯಮ ಮಾಡಿದೆ. ಯಾರ ಆಹಾರ ಪದ್ಧತಿ ಮೇಲೆ ನಮ್ಮ ಸರ್ಕಾರ ಹಸ್ತಕ್ಷೇಪ ಮಾಡೋದಲ್ಲ. ಇದೊಂದು‌ ಒಳ್ಳೆಯ ಸಂಪ್ರದಾಯವಲ್ಲ ಎಂದರು.

ರಾಜ್ಯ  ಸರ್ಕಾರವೇ ಇಂತಹ ಕೆಲಸಕ್ಕೆ ಕುಮ್ಮಕ್ಕು ನೀಡಿದಂತಿದೆ. ಸಿಎಂ ತವರು ಜಿಲ್ಲೆಯಲ್ಲೆ ಇಂತಹ ಘಟನೆ ನಡೆದಿರುವುದು ಸರಿಯಲ್ಲ. ಇದನ್ನು ನೋಡಿದರೆ ಸಿಎಂ ಸಿದ್ದರಾಮಯ್ಯ ಅವರೆ ಇದಕ್ಕೆ ಕುಮ್ಮಕ್ಕು ನೀಡಿದಂತೆ ತೋರುತ್ತದೆ. ಕೂಡಲೇ ಗೋಮಾಂಸ ಭಕ್ಷಣೆ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದ ಪಠ್ಯ ಪುಸ್ತಕದಲ್ಲಿ ಕೆಂಪೇಗೌಡರ ಜೀವನ ಚರಿತ್ರೆ ಅಳವಡಿಸಲಾಗುವುದು. ನಗರದ ಹೃದಯ ಭಾಗದಲ್ಲಿ ಬೃಹತ್ ಕೆಂಪೇಗೌಡ ಪುತ್ಥಳಿ ನಿರ್ಮಾಣ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. (ವರದಿ-ಎಸ್.ಎನ್, ಎಂ.ಎನ್)

 

Leave a Reply

comments

Related Articles

error: