ದೇಶಪ್ರಮುಖ ಸುದ್ದಿ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ : ಉಡುಪಿಯಲ್ಲಿ ನಿರ್ಧಾರವಾಗಲಿದೆ ಮುಹೂರ್ತ

ನವದೆಹಲಿ, ಜೂ.27 : ಅಯೋಧ್ಯೆಯಲ್ಲಿನ ಉದ್ದೇಶಿತ ರಾಮಮಂದಿರ ನಿರ್ಮಾಣಕ್ಕಾಗಿ ಕಾಮಗಾರಿ ಆರಂಭಿಸುವ ಮುಹೂರ್ತವು ಕರ್ನಾಟಕದ ಉಡುಪಿಯಲ್ಲಿ ನಿರ್ಧಾರವಾಗಲಿದೆ ಎಂದು ತಿಳಿದು ಬಂದಿದೆ.

ಕೇಂದ್ರ ಮತ್ತು ಉತ್ತರಪ್ರದೇಶದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿರುವುದರಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಕನಸನ್ನು ಕಾರ್ಯರೂಪಕ್ಕೆ ತರಲು ನಿರ್ಧಾರ ಮಾಡಿರುವ ಹಿಂದೂ ಸಂಘಟನೆಗಳು, ಶೀಘ್ರವೇ ನಿರ್ಮಾಣ ಕಾರ್ಯ ಆರಂಭಿಸುವ ಘೋಷಣೆ ಮಾಡಿವೆ. ಈ ಕಾರ್ಯಕ್ಕಾಗಿ ಮುಹೂರ್ತವನ್ನು ಇದೇ ವರ್ಷ ನವೆಂಬರ್‍ನಲ್ಲಿ ಕರ್ನಾಟಕದ ಉಡುಪಿಯಲ್ಲಿ ನಡೆಯಲಿರುವ ಧರ್ಮ ಸಂಸತ್‍ನಲ್ಲಿ ನಡೆಸಲು ನಿಶ್ಚಯಿಸಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ.

ಸ್ವಕ್ಷೇತ್ರ ಉನ್ನಾವ್‍ನಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಇತ್ತೀಚಿನ ಕರ್ನಾಟಕ ಪ್ರವಾಸದ ಸಂದರ್ಭದಲ್ಲಿ ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದರನ್ನು ಭೇಟಿ ಮಾಡಿದ ಸಂದರ್ಭ ಈ ವಿಷಯವಾಗಿ ಚರ್ಚಿಸಿದ್ದೇನೆ. ನ.23ರಿಂದ 26ರವರೆಗೆ ಉಡುಪಿಯಲ್ಲಿ ನಡೆಯುವ ಧರ್ಮಸಂಸತ್‍ನಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಲಿರುವ ಸಾವಿರಾದು ಸಾಧು ಸಂತರು ಭಾಗವಹಿಸಲಿದ್ದಾರೆ. ಈ ವೇಳೆ ಚರ್ಚಿಸಿ ರಾಮಮಂದಿರ ನಿರ್ಮಾಣಕ್ಕೆ ಮುಹೂರ್ತ ನಿಗದಿಪಡಿಸಲಾಗುವುದು ಎಂದರು.

-ಎನ್.ಬಿ.

Leave a Reply

comments

Related Articles

error: