ಮೈಸೂರು

ಜಟ್ಟಿಗಳೊಂದಿಗೆ ಶಾಂತ ರೀತಿಯಲ್ಲಿ ವರ್ತಿಸಿ: ಪ್ರಮೋದಾ ದೇವಿ

ಜಟ್ಟಿಗಳೊಂದಿಗೆ ಪೊಲೀಸರ ಮಾತಿನ ಚಕಮಕಿ ಬಗ್ಗೆ ರಾಜ ಮಾತೆ ಪ್ರಮೋದಾ ದೇವಿ ಬೇಸರ ವ್ಯಕ್ತಪಡಿಸಿದ್ದಾರೆ. ಜಟ್ಟಿಗಳೊಂದಿಗೆ ಶಾಂತ ರೀತಿಯಲ್ಲಿ ವರ್ತಿಸಿ ಎಂದು ಪೊಲೀಸರಿಗೆ ಸೂಚಿಸಿದ್ದಾರೆ.

ಜಟ್ಟಿ ಕಾಳಗದಲ್ಲಿ ಭಾಗವಹಿಸಲು ಬಂದ ಜಟ್ಟಿಗಳನ್ನು ಪೊಲೀಸರು ಅರಮನೆ ಪ್ರವೇಶಿಸಿದಂತೆ ನಿರ್ಬಂಧಿಸಿದ್ದರು. ಈ ವೇಳೆ ಜಟ್ಟಿಗಳು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದು, ಅವಮಾನಿತರಾದ ಜಟ್ಟಿಗಳು ವಜ್ರ ಮುಷ್ಟಿ ಕಾಳಗವನ್ನು ಬಹಿಷ್ಕರಿಸಿ ಹೊರ ನಡೆದಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಮೋದಾ ದೇವಿ ಅವರು ದಸರಾದ ಪರಂಪರೆ ಮತ್ತು ಸಂಪ್ರದಾಯವನ್ನು ಪಾಲಿಸುವ ಜಟ್ಟಿಗಳನ್ನು ಅವಮಾನಿಸಬೇಡಿ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಎಸಿಪಿ ಶೈಲೇಂದ್ರ ಜಟ್ಟಿಗಳ ಮನವೊಲಿಸಿ ಅಖಾಡಕ್ಕಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

comments

Related Articles

error: