Uncategorizedಮೈಸೂರು

ಮೈನವಿರೇಳಿಸಿದ ಜಟ್ಟಿ ಕಾಳಗ: ಯದುವೀರ್ ಒಡೆಯರಿಂದ ಬನ್ನೀ ಪೂಜೆ

ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ವಿಜಯದಶಮಿಯಂದು ವಜ್ರಮುಷ್ಠಿ ಕಾಳಗ ನಡೆಯಲೇಬೇಕು.  ರಾಜಮನೆತನದವರ ಸಮ್ಮುಖದಲ್ಲಿ ಪರಸ್ಪರ ತೊಡೆ ತಟ್ಟಿ ಅಖಾಡಕ್ಕಿಳಿಯುವ ಜಟ್ಟಿಗಳು ವಜ್ರದಂತಹ ಆಯುಧಗಳಿಂದ ಸೆಣಸಾಡಿ ನೆತ್ತರು ಹರಿಸಿಕೊಳ್ಳುವ ಒಂದು ರೋಚಕ ಕಾಳಗ ಇದಾಗಿದ್ದು 2016ರ ವಜ್ರಮುಷ್ಠಿ ಕಾಳಗ ಮಂಗಳವಾರ ಅರಮನೆ ಆವರಣದಲ್ಲಿರುವ ಕಲ್ಯಾಣ ಮಂಟಪದ  ಕನ್ನಡಿ ತೊಟ್ಟಿಯ ಅಖಾಡದಲ್ಲಿ ನಡೆದಿದ್ದು ಪ್ರೇಕ್ಷಕರ ಮೈನವಿರೇಳಿಸಿತು.

ನಾಡದೇವಿ ಶ್ರೀ ಚಾಮುಂಡೇಶ್ವರಿ ಹಾಗೂ ಮೈಸೂರು ರಾಜ ಮನೆತನವನ್ನು ಸ್ಮರಿಸಿ ನಡೆಸಿದ ಈ ಕಾಳಗದಲ್ಲಿ ಜಟ್ಟಿಗಳಾದ ನಾರಾಯಣ, ಮಧುಸೂದನ್, ವೆಂಕಟೇಶ್, ನರಸಿಂಹ ಪಾಲ್ಗೊಂಡಿದ್ದು, ನಾರಾಯಣ ಜಟ್ಟಿ ಅವರಿಗೆ ತಲೆಯಲ್ಲಿ ರಕ್ತ ಚಿಮ್ಮಿದೆ.

ಜಟ್ಟಿ ಕಾಳಗದಲ್ಲಿ ಜಟ್ಟಿಗಳ ತಲೆಯಿಂದ ಸೋರುವ ರಕ್ತವನ್ನು ವೀಕ್ಷಿಸಿದ ಬಳಿಕ ಮಹಾರಾಜ ಯದುವೀರ ಕೃಷ್ಣದತ್ತ ನರಸಿಂಹರಾಜ ಒಡೆಯರ್  ಬೆಳ್ಳಿಯ ಪಲ್ಲಕ್ಕಿಯಲ್ಲಿ ಕುಳಿತು ಭುವನೇಶ್ವರಿ ದೇಗುಲದ  ಆವರಣಕ್ಕೆ ತೆರಳಿ ಬನ್ನೀ ವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿದರು.  ನಂತರ ಕಾಳಗದಲ್ಲಿ ಜಯಿಸಿದ ಜಟ್ಟಿಗಳಿಗೆ ಉಡುಗೊರೆಯನ್ನು ನೀಡಲಾಯಿತು. ಜೆಟ್ಟಿಕಾಳಗವನ್ನುರಾಜಮಾತೆ ಪ್ರಮೋದಾದೇವಿ ಹಾಗೂ ರಾಣಿ ತ್ರಿಷಿಕಾದೇವಿ ಮಹಡಿಯಲ್ಲಿ ನಿಂತು ವೀಕ್ಷಿಸಿದjatti-web-1ರು.

Leave a Reply

comments

Related Articles

error: