ಕರ್ನಾಟಕಮನರಂಜನೆ

ಗ್ರಾಮವನ್ನು ದತ್ತು ಪಡೆದ ಪ್ರಕಾಶ್ ರೈ

ರಾಜ್ಯ(ಬೆಂಗಳೂರು)ಜೂ.27:- ಹಲವು ಭಾಷೆಗಳಲ್ಲಿ ನಟಿಸಿದ ಖ್ಯಾತಿಗಳಿಸಿದ ಪ್ರಕಾಶ್ ರೈ ಸದಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುತ್ತಾರೆ.

ಪ್ರಕಾಶ ರೈ ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆಯ ಕೊಂಡಾರೆಡ್ಡಿಪಲ್ಲಿ ಗ್ರಾಮವನ್ನು ದತ್ತು ಪಡೆದಿದ್ದು, ಆ ಊರಿನಲ್ಲಿ ರಂಜಾನ್ ಹಬ್ಬವನ್ನು ಅಲ್ಲಿನ ಮುಸ್ಲಿಂ ಬಾಂಧವರೊಂದಿಗೆ ಆಚರಿಸಿದರು. ಅಷ್ಟೇ ಅಲ್ಲ ಇಲ್ಲಿನ ವ್ಯಕ್ತಿಯೋರ್ವರ ಮನೆ ಶಿಥಿಲಗೊಂಡಿದ್ದು, ಅದನ್ನು ಪ್ರಕಾಶ್ ರಾಜ್ ಫೌಂಡೇಶನ್ ಮೂಲಕ ದುರಸ್ತಿ ಮಾಡಿಸಿಕೊಟ್ಟಿದ್ದಾರಂತೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: