ಮೈಸೂರು

ಶಂಕಿತ ಡೆಂಗ್ಯೂಗೆ ಮತ್ತೋರ್ವ ಬಾಲಕಿ ಬಲಿ

ಮೈಸೂರು,ಜೂ.27:- ಮಂಗಳವಾರ ಬೆಳಿಗ್ಗೆ ಮೈಸೂರಿನಲ್ಲಿ ಮತ್ತೋರ್ವ ಬಾಲಕಿ ಶಂಕಿತ ಡೆಂಗ್ಯೂಗೆ ಬಲಿಯಾಗಿದ್ದಾಳೆ.

ಮೃತ ಬಾಲಕಿಯನ್ನು ಗಾಯತ್ರಿಪುರಂ ಎರಡನೇ ಹಂತದ  ನಿವಾಸಿ ಪ್ರಕಾಶ್ ಮತ್ತು ರಾಣಿ ಎಂಬವರ ಪುತ್ರಿ ಜೈಷ್ಣವಿ(7) ಎಂದು ಗುರುತಿಸಲಾಗಿದೆ. ಕಳೆದ ಮೂರು ದಿನಗಳಿಂದ ಬಾಲಕಿಗೆ ಜ್ವರ ಬಂದಿತ್ತು. ಅದರಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಸಾವನ್ನಪ್ಪಿದ್ದಾಳೆ. ಆಸ್ಪತ್ರೆಯವರು ವರದಿ ಸಿಕ್ಕ ತಕ್ಷಣ ಯಾಕಾಗಿ ಸತ್ತಳು ಎನ್ನುವುದು ತಿಳಿದುಬರಲಿದೆ ಎಂದಿದ್ದಾರೆ. ಗಾಯತ್ರಿಪುರಂನಲ್ಲಿ ಸ್ವಚ್ಛತೆ ಇಲ್ಲ.ಅದರಿಂದ ಸೊಳ್ಳೆಗಳು ಹೆಚ್ಚಿವೆ. ಸೊಳ್ಳೆ ಕಡಿತದಿಂದ ಬಾಲಕಿಗೆ ಜ್ವರಬಂದಿರಬಹುದು ಎಂದು ಆರೋಪಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: