ಮೈಸೂರು

ಗಿಡ ನೆಡುವ ಮೂಲಕ ಕೆಂಪೇಗೌಡ ಜಯಂತೋತ್ಸವ ಆಚರಣೆ

ಮೈಸೂರು, ಜೂ.27- ತಾಲೂಕಿನ ಹಂಚ್ಯಾ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಜಿ.ಪಂ ಸದಸ್ಯ ಮಾದೇಗೌಡ ಗಿಡ ನೆಡುವ ಮೂಲಕ ಕೆಂಪೇಗೌಡ ಜಯಂತೋತ್ಸವವನ್ನು ಆಚರಿಸಲಾಯಿತು.
ಹಂಚ್ಯಾ ಒಕ್ಕಲಿಗ ಸಂಘ ಹಾಗೂ ಕೆಂಪೇಗೌಡ ಟೈಗರ್ಸ್ ಯುವ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಕೆಂಪೇಗೌಡ ಜಯಂತೋತ್ಸವ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕೆಂಪೇಗೌಡ ಕೇವಲ ಒಂದು ಸಮುದಾಯ ಹಾಗೂ ಜಾತಿಗೆ ಸೀಮಿತವಾಗಿಲ್ಲ. ಎಲ್ಲಾ ಸಮುದಾಯದ ಅಭಿವೃದ್ಧಿಗೂ ಶ್ರಮಿಸಿದ್ಧಾರೆ. ಈ ದಿಸೆಯಲ್ಲಿ ಎಲ್ಲಾ ಸಮುದಾಯವರು ಅವರ ಕೆಲಸವನ್ನು ಸ್ಮರಿಸುವ ಕೆಲಸ ಆಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ವೃತ್ತಕ್ಕೆ ಕೆಂಪೇಗೌಡ ವೃತ್ತ ಎಂದು ನಾಮಕರಣ ಮಾಡಿ ಅನಾವರಣಗೊಳಿಸಲಾಯಿತು. ತಾಲೂಕು ಪಂಚಾಯತ್ ಸದಸ್ಯ ತಮ್ಮೇಗೌಡ, ಗ್ರಾ.ಪಂ ಸದಸ್ಯ. ಚೆನ್ನಯ್ಯ,  ಗ್ರಾಮದ ಮುಖಂಡರಾದ ಶ್ರೀನಿವಾಸ್, ಬೋರೇಗೌಡ, ದೇವೇಗೌಡ, ಉಮೇಶ್ ಗೌಡ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: