ಮೈಸೂರು

ಜಂಬೂ ಸವಾರಿಗೂ ಮುನ್ನ ವರುಣನಾಗಮನ

ಮೈಸೂರಿನಲ್ಲಿ ಐತಿಹಾಸಿಕ ದಸರಾ ಉತ್ಸವದ ಜಂಬೂಸವಾರಿಗೆ ಕ್ಷಣಗಣನೆ ನಡೆಯುತ್ತಿದ್ದು, ಜಂಬೂಸವಾರಿಯನ್ನು ವೀಕ್ಷಿಸಲು ವರುಣನ ಆಗಮನವೂ ಆಗಿದ್ದು, ಮೈಸೂರಿನಲ್ಲಿ ಮಳೆ ಸುರಿಯುತ್ತಿದೆ.

ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯನ್ನು ವೀಕ್ಷಿಸಲು ದೇಶ ವಿದೇಶಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದು ಮಳೆಯ ಆರ್ಭಟವೂ ಜೋರಾಗಿಯೇ ಇದೆ. ಕೆಲವರು ಅಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿದ್ದ ಖುರ್ಚಿಗಳನ್ನೇ ತಲೆಗೆ ಅಡ್ಡಲಾಗಿ ಹಿಡಿದಿರುವುದು ಕಂಡು ಬಂದರೆ. ಇನ್ನೊಂದು ಕಡೆ  ಅನಿರೀಕ್ಷಿತವಾಗಿ  ಸುರಿದ ಮಳೆಗೆ ಸಾರ್ವಜನಿಕರು ತೊಯ್ದರು.

ಕೆಲವರು ಬಿಸಿಲಿನ ಆಶ್ರಯಕ್ಕೆಂದು ಛತ್ರಿ ತಂದಿದ್ದು, ಅದನ್ನೇ ಆಸರೆಯಾಗಿ ಹಿಡಿದುಕೊಂಡಿರುವುದು ಕಂಡು ಬಂತು. ಇನ್ಕೆಲವರು ಛತ್ರಿ ತರದೆ  ಮಳೆಗೆ ಸಂಪೂರ್ಣ ತೊಯ್ದು ಹೋಗಿರುವುದು ಕಂಡು ಬಂತು. ದಸರಾ ನೋಡಲು ಬಂದ ಪ್ರವಾಸಿಗರಿಗೆ ವರುಣನ ಆಗಮನ ಸ್ವಲ್ಪ ಬೇಸರ ತರಿಸಿದೆ. ಮಳೆಯು ದಸರಾ ಮೆರವಣಿಗೆಗೆ ಅಡ್ಡಿಯಾಗಬಹುದೇನೋ ಎನ್ನುವ ಆತಂಕ ಜನರನ್ನು ಕಾಡುತ್ತಿದೆ.

Leave a Reply

comments

Related Articles

error: