ಪ್ರಮುಖ ಸುದ್ದಿ

ಟ್ರಂಪ್ ದಂಪತಿಗೆ ಮೋದಿ ವಿಶೇಷ ಉಡುಗೊರೆ

ಪ್ರಮುಖ ಸುದ್ದಿ, ನವದೆಹಲಿ, ಜೂ.27: ಪ್ರಧಾನಿ ನರೇಂದ್ರ ಮೋದಿ ಅಮೆರಿಕಾ ಪ್ರವಾಸದಲ್ಲಿದ್ದು, ಅಮೆರಿಕಾ ಅಧ್ಯಕ್ಷ ಡೊನ್ಕಾಲ್ಡ್ ಟ್ರಂಪ್ ದಂಪತಿಗೆ ವಿಶೇಷ ಉಡುಗೊರೆ ನೀಡಿ ತಮ್ಮ ಪ್ರವಾಸವನ್ನು ಅವಿಸ್ಮರಣೀಯವಾಗಿಸಿಕೊಂಡಿದ್ದಾರೆ.
ಮೋದಿಯನ್ನು ಟ್ರಂಪ್ ಮತ್ತು ಅವರ ಪತ್ನಿ ಆತ್ಮೀಯವಾಗಿ ಸ್ವಾಗತಿಸಿ ಉಭಯ ಕುಶಲೋಪರಿ ನಡೆಸಿದ್ದರು. ಬಳಿಕ ಮೋದಿ ಟ್ರಂಪ್‌ಗೆ ೧೯೬೫ರಲ್ಲಿ ಬಿಡುಗಡೆಯಾದ ಅಬ್ರಹಾಂ ಲಿಂಕನ್ ಪುಣ್ಯ ಸ್ಮರಣೆಯ ಅಂಚೆ ಚೀಟಿ ಹಾಗೂ ಅವರ ಪತ್ನಿ ಮೆಲಾನಿಯಾ ಟ್ರಂಪ್ ಅವರಿಗೆ ಸಾಂಪ್ರದಾಯಿಕ, ಕರಕುಶಲ ಕಲೆಯ ಹಿಮಾಚಲ ಬೆಳ್ಳಿ ಬ್ರೇಸ್‌ಲೆಟ್, ಕಂಗರಾದ ಚಹಾಪುಡಿ ಮತ್ತು ಜೇನು ತುಪ್ಪ, ಜಮ್ಮು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದ ಶಾಲನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರಿಗೆ ಗೌರವ ಸೂಚಿಸುವ ಅಂಚೆ ಚೀಟಿಯಾಗಿದೆ ಇದು. ಮಹಾತ್ಮಗಾಂಧಿ ಮತ್ತು ಲಿಂಕನ್ ನಂಬಿದ್ದ ಧ್ಯೇಯಗಳ ಪ್ರತೀಕವಾಗಿ ಇದನ್ನು ನೀಡಲಾಗಿದೆ ಎಂದು ಉಡುಗೊರೆಯ ಚಿತ್ರವನ್ನು ಪ್ರಧಾನಿಯವರ ಕಚೇರಿ ಟ್ವೀಟ್ ಮಾಡಿದೆ. (ವರದಿ ಬಿ.ಎಂ)

Leave a Reply

comments

Related Articles

error: