ಕರ್ನಾಟಕ

ಯಾವೊಬ್ಬ ಕೊಲೆಗಾರನಿಗೂ ನಾನು ಆಶ್ರಯ ಕೊಟ್ಟವನಲ್ಲ : ಬಿ.ರಮಾನಾಥ ರೈ

ರಾಜ್ಯ(ಮಂಗಳೂರು)ಜೂ.27:-ನಾನು ಯಾವೊಬ್ಬ ಕೊಲೆಗಾರನಿಗೂ ಆಶ್ರಯ ಕೊಟ್ಟವನಲ್ಲ ಪ್ರಚೋದನಕಾರಿ ಭಾಷಣವನ್ನೂ ಮಾಡಿದವನಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸ್ಪಷ್ಟಪಡಿಸಿದ್ದಾರೆ.

ಮಂಗಳೂರಿನಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕೊಲೆಗಾರರಿಗೆ ಆಶ್ರಯ ಕೊಟ್ಟವರನ್ನು’ಪ್ರಚೋದನಕಾರಿ ಭಾಷಣ ಮಾಡಿದವರನ್ನು ಬಂಧಿಸುವ ಬಗ್ಗೆ ತಾನು ಮುಖ್ಯಮಂತ್ರಿ, ಡಿಜಿಪಿ ಮತ್ತಿತರ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ.  ನಾನು ಎಲ್ಲ ಜಾತಿ, ಧರ್ಮದ ಜೊತೆ ಅನ್ಯೋನ್ಯತೆಯಿಂದಿದ್ದೇನೆ ಕ್ಷೇತ್ರದಲ್ಲೂ ಸಾಕಷ್ಟು ಅಭಿವೃದ್ಧಿ ಕಾರ್ಯ ಆಗಿದೆ. ಮತೀಯ ಶಕ್ತಿಗಳು ನನ್ನನ್ನು ಗುರಿಯಾಗಿಸಿಕೊಂಡಿವೆ ಎಂದು ಆರೋಪಿಸಿದರು. ಶಾಂತಿ ಕಾಪಾಡಲು ನಾನು ಜಿಲ್ಲಾ ಎಸ್ಪಿ ಜೊತೆ ಮಾತನಾಡಿದ್ದರಲ್ಲಿ ತಪ್ಪಿಲ್ಲ ಅದನ್ನು ನಾನು ಈಗಲೂ ಸಮರ್ಥಿಸುತ್ತಿದ್ದೇನೆ. ನಾನು ಬಂಟ್ವಾಳ ಐಬಿಯಲ್ಲಿ ಎಸ್ಪಿ ಜೊತೆ ಮಾತನಾಡಿದ ಒಂದು ಭಾಗವನ್ನು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಡಲಾಗಿದೆ. ನನ್ನನ್ನು ಹಿಂದು ಮತ್ತು ಮುಸ್ಲಿಂ ಮತೀಯವಾದಿಗಳು ಟೀಕಿಸುತ್ತಲೇ ಇದ್ದಾರೆ ಆ ಮೂಲಕ ನಾನು ಅಪ್ಪಟ ಜಾತ್ಯತೀತ ಎಂಬುದು ಸಾಬೀತಾಗಿದೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: